#Metoo ಬಾಣಕ್ಕೆ ಮೊದಲ ಬಲಿ: ಕೇಂದ್ರ ಸಚಿವ ಎಂ ಜೆ ಅಕ್ಬರ್‌ ರಾಜೀನಾಮೆ

0
348

ಮಿಟೂ ಅಭಿಯಾನದಲ್ಲಿ 18 ಮಹಿಳೆಯರಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹೊಸದಿಲ್ಲಿ: ಮಿ ಟೂ ಅಭಿಯಾನದ ಮೂಲಕ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ ಜೆ ಅಕ್ಬರ್ ತಮ್ಮ ಸ್ಥಾನಕ್ಕೆ 2018 ಅಕ್ಟೋಬರ್ 17 ರಂದು ರಾಜೀನಾಮೆ ನೀಡಿದ್ದಾರೆ.

ಪತ್ರಿಕೆಯೊಂದರಲ್ಲಿ ಅಕ್ಬರ್‌ ಜತೆ ಕೆಲಸ ಮಾಡಿದ್ದ ತುಷಿತಾ ಪಟೇಲ್‌ ಎಂಬುವವರು ಮಂಗಳವಾರ ತಮ್ಮ ಜತೆ ಅಕ್ಬರ್‌ ಅವರ ನಡವಳಿಕೆಯ ಹಲವು ಪ್ರಸಂಗಗಳನ್ನು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಬರ್‌ ರಾಜೀನಾಮೆಗೆ ಹಲವಾರು ಮಂದಿ ಪಟ್ಟು ಹಿಡಿದಿದ್ದರು. ಒಟ್ಟಾರೆ 18 ಮಹಿಳೆಯರು ಅಕ್ಬರ್‌ ವಿರುದ್ಧ ಮಿ ಟೂ ಅಭಿಯಾನದ ಮೂಲಕ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು

ಸೋಮವಾರ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಪಟಿಯಾಲ ಕೋರ್ಟ್‌ನಲ್ಲಿ ಅಕ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಮಣಿ, ಕಾನೂನು ಹೋರಾಟಕ್ಕೆ ಸಿದ್ದ ಎಂದು ತಿಳಿಸಿದ್ದರು. ಅಲ್ಲದೆ ಅಕ್ಬರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕೆಂದು ಆಗ್ರಹಿಸಿದ್ದರು.