LPG: ಸಬ್ಸಿಡಿ ರಹಿತ ಎಲ್‌ಪಿಜಿ ದರ 59 ರೂ. ಏರಿಕೆ

0
725

ಸಬ್ಸಿಡಿ ಸಹಿತ ಅಡುಗೆ ಅನಿಲ ದರದಲ್ಲಿ 2.89 ರೂ. ಏರಿಕೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್‌ ದರ 502.4 ರೂ.ಗಳಿಗೆ ತಲುಪಿದೆ. ಇದೇ ವೇಳೆ, ಸಬ್ಸಿಡಿರಹಿತ ಪ್ರತಿ ಸಿಲಿಂಡರ್‌ ದರದಲ್ಲಿ 59 ರೂ. ಹೆಚ್ಚಳಗೊಂಡಿದೆ.

ಹೊಸದಿಲ್ಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ ದರದಲ್ಲಿ 2.89 ರೂ. ಏರಿಕೆ ಮಾಡಲಾಗಿದ್ದು, ಪ್ರತಿ ಸಿಲಿಂಡರ್‌ ದರ 502.4 ರೂ.ಗಳಿಗೆ ತಲುಪಿದೆ. ಇದೇ ವೇಳೆ, ಸಬ್ಸಿಡಿರಹಿತ ಪ್ರತಿ ಸಿಲಿಂಡರ್‌ ದರದಲ್ಲಿ 59 ರೂ. ಹೆಚ್ಚಳಗೊಂಡಿದೆ.

ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ಬದಲಾವಣೆಯ ಕಾರಣ ಎಂದು ಭಾರತೀಯ ತೈಲ ನಿಗಮ (ಐಒಸಿ) ತಿಳಿಸಿದೆ. ಸಬ್ಸಿಡಿ ಸಹಿತ ಸಿಲಿಂಡರ್‌ಗಳ ಬೆಲೆಯಲ್ಲಿ ಆಗಿರುವ ಏರಿಕೆಗೆ ಜಿಎಸ್‌ಟಿ ಮುಖ್ಯ ಕಾರಣ ಎಂದು ಸ್ಪಷ್ಟನೆ ನೀಡಲಾಗಿದೆ. ಗ್ರಾಹಕರ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುವ ಸಬ್ಸಿಡಿ ಮೊತ್ತ ಮುಂದಿನ ಬಾರಿ 376 ರೂ. ಆಗಲಿದೆ.