IndiGo Sale: 999 ರೂ.ಗೆ ವಿಮಾನದಲ್ಲಿ ಹಾರಾಡಿ, ಇಂಡಿಗೋದಿಂದ 600 ರೂ. ಕ್ಯಾಶ್‌ಬ್ಯಾಕ್‌ ಆಫರ್‌!

0
546

ಸೋಮವಾರದಿಂದ ಸೆಪ್ಟಂಬರ್‌ 6ರ ವರೆಗೆ ಇಂಡಿಗೋ 4 ದಿನಗಳ ಭರ್ಜರಿ ಮೆಗಾ ಟಿಕೆಟ್‌ ಮಾರಾಟ ನಡೆಸುತ್ತಿದ್ದು, ಕೇವಲ 999 ರೂ.ಗಳಿಗೂ ಟಿಕೆಟ್‌ ಲಭ್ಯವಿದೆ. ಮೊಬಿಕ್ವಿಕ್‌ (MobiKwik)

ಹೊಸದಿಲ್ಲಿ: ಸೆಪ್ಟೆಂಬರ್ 3 ರ ಸೋಮವಾರದಿಂದ ಸೆಪ್ಟಂಬರ್‌ 6ರ ವರೆಗೆ ಇಂಡಿಗೋ 4 ದಿನಗಳ ಭರ್ಜರಿ ಮೆಗಾ ಟಿಕೆಟ್‌ ಮಾರಾಟ ನಡೆಸುತ್ತಿದ್ದು, ಕೇವಲ 999 ರೂ.ಗಳಿಗೂ ಟಿಕೆಟ್‌ ಲಭ್ಯವಿದೆ. 

ಸೆಪ್ಟಂಬರ್‌ 18, 2018 ರಿಂದ ಮಾರ್ಚ್‌ 30, 2019ರ ವರೆಗೆ ಕಡಿಮೆ ದರಕ್ಕೆ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದ್ದು, ಈ ಆಫರ್‌ನಡಿ ಬರೋಬ್ಬರಿ 10 ಲಕ್ಷ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟಿದೆ. ಷರತ್ತು ಎಂದರೆ ಒಂದು ಬದಿಯ ಪ್ರಯಾಣಕ್ಕೆ ಮಾತ್ರ ಈ ಆಫರ್‌ ಅನ್ವಯಿಸುತ್ತದೆ. 

ಕ್ಯಾಶ್‌ಬ್ಯಾಕ್‌ ಆಫರ್‌: 
ಮೊಬಿಕ್ವಿಕ್‌ (MobiKwik) ಆ್ಯಪ್‌ ಮೂಲಕ ಟಿಕೆಟ್‌ ಕಾಯ್ದಿರಿಸಿದರೆ ಶೇ.20 ಅಥವಾ 600 ರೂ. ಕ್ಯಾಶ್‌ ಬ್ಯಾಕ್‌ ಕೂಡ ಸಿಗಲಿದೆ. 

ಈ ಆಫರ್‌ನಡಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್‌ ದರ 3,199 ರೂ. ನಿಂದ ಆರಂಭಗೊಳ್ಳುತ್ತದೆ. ದಿನಕ್ಕೆ 1,100 ಇಂಡಿಗೋ ವಿಮಾನಗಳು 52 ಪ್ರದೇಶಗಳಿಗೆ ಪ್ರಯಾಣಿಸುತ್ತವೆ. ಇದರಲ್ಲಿ 8 ವಿದೇಶಗಳಿಗೆ ಪ್ರಯಾಣಿಸುತ್ತವೆ. 

ಕಳೆದ ಜುಲೈನಲ್ಲಿ ಇಂಡಿಗೋ 12 ಲಕ್ಷ ಸೀಟುಗಳನ್ನು ಕಡಿಮೆ ದರಕ್ಕೆ (1,212 ರೂ.ಗಳಿಂದ ಆರಂಭ) ಮಾರಾಟ ಮಾಡಿತ್ತು.