9,100 ಕೋಟಿ ರೂ. ವೆಚ್ಚದ ದೇಶೀ ರಕ್ಷಣಾ ಉಪಕರಣ ಖರೀದಿಗೆ ಕೇಂದ್ರ ಒಪ್ಪಿಗೆ

0
448

ಮಹತ್ವದ ನಿರ್ಧಾರವೊಂದರಲ್ಲಿ 9,100 ಕೋಟಿ ರೂ. ವೆಚ್ಚದ ಸ್ವದೇಶಿ ರಕ್ಷಣಾ ಉಪಕರಣ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಖರೀದಿ ಸಮಿತಿ ಒಪ್ಪಿಗೆ ಸೂಚಿಸಿದೆ. ಸ್ವದೇಶಿ

ಹೊಸದಿಲ್ಲಿ: ಮಹತ್ವದ ನಿರ್ಧಾರವೊಂದರಲ್ಲಿ 9,100 ಕೋಟಿ ರೂ. ವೆಚ್ಚದ  ಸ್ವದೇಶಿ ರಕ್ಷಣಾ ಉಪಕರಣ ಖರೀದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಖರೀದಿ ಸಮಿತಿ ಒಪ್ಪಿಗೆ ಸೂಚಿಸಿದೆ. 

ಸೆಪ್ಟೆಂಬರ್ 18 ರ ಮಂಗಳವಾರ ನಡೆದ ಸಭೆಯಲ್ಲಿ ಸ್ವದೇಶಿ ಉಪಕರಣ ಮತ್ತು ರಕ್ಷಣಾ ಸಲಕರಣೆಗಳ ಖರೀದಿಗೆ ಸಮಿತಿ ಸಮ್ಮತಿಸಿದ್ದು, ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಪೂರಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಆಕಾಶ್ ಕ್ಷಿಪಣಿಗೆ ಭಾರತ್‌ ಡೈನಾಮಿಕ್ಸ್ ಲಿ.ನಿಂದ ಸ್ವದೇಶಿ ನಿರ್ಮಿತ ಉಪಕರಣ ಹಾಗು ಟಿ90 ಟ್ಯಾಂಕ್‌ಗಳಿಗೆ ಅಂಡರ್‌ ವಾಟರ್ ಬ್ರೀಥಿಂಗ್ ಅಪರೇಟಸ್ (ಐಯುಡಬ್ಲ್ಯೂಬಿಎ)ಯ ವಿನ್ಯಾಸ ಮತ್ತು ಅಭಿವೃದ್ಧಿಪಡಿಸುವುದು ಸೇರಿದೆ. 

ಆಕಾಶ್ ಕ್ಷಿಪಣಿಗಳ ಮತ್ತಷ್ಟು ಬಲವರ್ಧನೆ ಹಾಗು ಮತ್ತಷ್ಟು ಪ್ರಬಲವನ್ನಾಗಿ ರೂಪಿಸಲು ಇದರಿಂದ ಸಾಧ್ಯವಾಗುತ್ತದೆ.ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದರಿಂದ ವಿವಿಧ ಸಂದರ್ಭದಲ್ಲಿ ಬಳಸಲು ಅನುಕೂಲವಾಗಲಿದೆ. 

ಐಯುಡಬ್ಲ್ಯೂಬಿಎ ವ್ಯವಸ್ಥೆಯನ್ನು ಟ್ಯಾಂಕ್‌ಗಳು ಸೇಫ್ಟಿ ಗೇರ್ ಮತ್ತು ತುರ್ತು ಸಂದರ್ಭದಲ್ಲಿ ಪರಾರಿಯಾಗಲು ಹಾಗು ಹೆಚ್ಚು ನೀರಿರುವ ಪ್ರದೇಶದಲ್ಲಿ ಸುಲಲಿತವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. 

ಜತೆಗೆ ಟಿ20 ಟ್ಯಾಂಕ್‌ಗಳಿಗೆ ನಿರ್ದೇಶಿತ ಕ್ಷಿಪಣಿ ಗುರಿ ವ್ಯವಸ್ಥೆಯನ್ನು ಕೂಡ ಡಿಆರ್‌ಡಿಒ ಮೂಲಕ ವಿನ್ಯಾಸ ಮತ್ತು ಅಭಿವೃದ್ಧಿಪಡಿಸಲು ಸಮಿತಿ ಸಮ್ಮತಿ ಸೂಚಿಸಿದೆ.