9 ವರ್ಷ ಹೋರಾಡಿ ಧರ್ಮ, ಜಾತಿ ಕಳೆದುಕೊಂಡ ದೇಶದ ಮೊದಲ ಮಹಿಳೆ! ಎ. ಸ್ನೇಹಾ

0
967

ಒಂದು ಶಾಲೆಗೆ ಮಕ್ಕಳನ್ನು ದಾಖಲಿಸುವುದಾಗಿರಲಿ ಅಥವಾ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದಿರಲಿ. ಅರ್ಜಿ ತುಂಬುವಾಗ ಮೊದಲಿಗೆ ತಂದೆಯ ಹೆಸರು, ಜಾತಿ, ಧರ್ಮದ ವಿವರಗಳನ್ನು ದಾಖಲಿಸುವುದು ಅನಿವಾರ್ಯವಾಗುತ್ತದೆ. ಮೀಸಲಾತಿ ನಿಯಮದಡಿ ಮೀಸಲು ಸೌಲಭ್ಯ, ಬಡ್ತಿ ಪಡೆಯಲು ಈ ಅಂಶಗಳು ಆಧಾರವಾಗುತ್ತವೆ. ಒಮ್ಮೊಮ್ಮೆ ಇಂತಹ ಪ್ರಮಾಣ ಪತ್ರಗಳನ್ನು ಪಡೆಯಲು ಅಲೆದಾಡಬೇಕಾಗುತ್ತದೆ.

ವೆಲ್ಲೋರ್​: ಒಂದು ಶಾಲೆಗೆ ಮಕ್ಕಳನ್ನು ದಾಖಲಿಸುವುದಾಗಿರಲಿ ಅಥವಾ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದಿರಲಿ. ಅರ್ಜಿ ತುಂಬುವಾಗ ಮೊದಲಿಗೆ ತಂದೆಯ ಹೆಸರು, ಜಾತಿ, ಧರ್ಮದ ವಿವರಗಳನ್ನು ದಾಖಲಿಸುವುದು ಅನಿವಾರ್ಯವಾಗುತ್ತದೆ. ಮೀಸಲಾತಿ ನಿಯಮದಡಿ ಮೀಸಲು ಸೌಲಭ್ಯ, ಬಡ್ತಿ ಪಡೆಯಲು ಈ ಅಂಶಗಳು ಆಧಾರವಾಗುತ್ತವೆ. ಒಮ್ಮೊಮ್ಮೆ ಇಂತಹ ಪ್ರಮಾಣ ಪತ್ರಗಳನ್ನು ಪಡೆಯಲು ಅಲೆದಾಡಬೇಕಾಗುತ್ತದೆ.

ಆದರೆ, ಇಲ್ಲೊಬ್ಬ ವಕೀಲೆ ತಮ್ಮ ಧರ್ಮ ಮತ್ತು ಜಾತಿಯನ್ನು ಕಳೆದುಕೊಂಡು, ಯಾವುದೇ ಧರ್ಮ, ಜಾತಿಗೆ ಸೇರಿದವರಲ್ಲ ಎಂದು ತಹಸೀಲ್ದಾರ್​ ಅವರಿಂದ ಪ್ರಮಾಣಪತ್ರ ಪಡೆಯಲು 9 ವರ್ಷ ಸುದೀರ್ಘ ನ್ಯಾಯಾಂಗ ಹೋರಾಟ ಸಂಘಟಿಸಿದರು ಎಂದರೆ ಆಶ್ಚರ್ಯ ಆಗಬಹುದಲ್ಲವೇ? ಈ ನಿಟ್ಟಿನಲ್ಲಿ ಈಕೆ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾಳೆ.

ತಮಿಳುನಾಡಿನ ತಿರುಪತ್ತೂರಿನಲ್ಲಿ ವೃತ್ತಿಯಿಂದ ವಕೀಲೆ ಆಗಿರುವ ಎ. ಸ್ನೇಹಾ ಎಂಬುವರು ಸತತ 9 ವರ್ಷ ಕಾನೂನು ಹೋರಾಟ ನಡೆಸಿದವರು. ಇವರು ಪಾರ್ಥಿಬಾರಾಜ್​ ಎಂಬ ಲೇಖಕರನ್ನು ವರಿಸಿದ್ದಾರೆ. ಆನಂತರದಲ್ಲಿ ಇವರು ತಮ್ಮ ಜಾತಿ ಮತ್ತು ಧರ್ಮವನ್ನು ಕಳೆದುಕೊಳ್ಳಬೇಕು ಎಂದು ನಿರ್ಧರಿಸಿದರು. ಈ ರೀತಿಯ ಪ್ರಮಾಣಪತ್ರ ನೀಡುವಂತೆ ಕೋರಿ ತಿರುಪತ್ತೂರು ತಹಸೀಲ್ಡಾರ್​ರನ್ನು ಸಂಪರ್ಕಿಸಿದರು. ತಹಸೀಲ್ದಾರ್​ ಇದಕ್ಕೆ ನಿರಾಕರಿಸಿದಾಗ ಸ್ನೇಹಾ ಕಾನೂನು ಹೋರಾಟಕ್ಕೆ ಮುಂದಾಗಿದ್ದರು.