80 ಲಕ್ಷಕ್ಕೆ ಸಿಗುತ್ತೆ ಎರಡು ಸೀಟರ್‌ಗಳ ಪುಟ್ಟ ವಿಮಾನ!

0
413

ಹವ್ಯಾಸಿ ಹಾರಾಟ, ಸಮುದ್ರ ತೀರದಲ್ಲಿ ಕಾವಲು, ಪೈಲಟ್‌ ತರಬೇತಿ ಸೇರಿ ವಿವಿಧ ಉದ್ದೇಶಗಳಿಗೆ ಈಗ ಅತ್ಯಂತ ಕಡಿಮೆ ಬೆಲೆಗೆ ವಿಮಾನ ಖರೀದಿಸಬಹುದು.

ಬೆಂಗಳೂರು: ಹವ್ಯಾಸಿ ಹಾರಾಟ, ಸಮುದ್ರ ತೀರದಲ್ಲಿ ಕಾವಲು, ಪೈಲಟ್‌ ತರಬೇತಿ ಸೇರಿ ವಿವಿಧ ಉದ್ದೇಶಗಳಿಗೆ ಈಗ ಅತ್ಯಂತ ಕಡಿಮೆ ಬೆಲೆಗೆ ವಿಮಾನ ಖರೀದಿಸಬಹುದು.

ಎರಡು ಸೀಟರ್‌ಗಳ ಪುಟ್ಟ ವಿಮಾನದ ಬೇಸ್‌ ಮಾಡೆಲ್‌ ಬೆಲೆ ಸುಮಾರು  80 ಲಕ್ಷ. ವಿವಿಧ ಆಧುನಿಕ ಉಪಕರಣಗಳನ್ನು ಒಳಗೊಂಡ ಪೂರ್ಣ ಪ್ರಮಾಣದ ವಿಮಾನದ ಬೆಲೆ  1 ಕೋಟಿ. ನ್ಯಾಷನಲ್‌ ಏರೋನಾಟಿಕಲ್‌ ಲ್ಯಾಬೊರೋಟರಿ ಮತ್ತು ಮೆಸ್ಕೊ ಏರೋಸ್ಪೇಸ್‌ ಲಿಮಿಟೆಡ್‌ ಜಂಟಿಯಾಗಿ ಕಡಿಮೆ ಬೆಲೆಯ, ಆದರೆ ಉತ್ತಮ ಗುಣಮಟ್ಟದ ವಿಮಾನ (ಹಂಸ ಎನ್‌ಜಿ) ತಯಾರಿಕೆಗೆ ಕೈ ಹಾಕಿವೆ.

ದೇಶದಲ್ಲಿ ತಕ್ಷಣಕ್ಕೆ ಎರಡು ಸೀಟರ್‌ಗಳ ಸಾಮರ್ಥ್ಯದ 70 ರಿಂದ 80 ಪುಟ್ಟ ವಿಮಾನಗಳಿಗೆ ಬೇಡಿಕೆ ಇದೆ. ಈ ಬೇಡಿಕೆಗಳನ್ನು ಪೂರೈಸುವ ಉದ್ದೇಶ
ದಿಂದ ವಿಮಾನಗಳ ವಿನ್ಯಾಸ, ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸಿಎಸ್‌ಐಆರ್‌– ಎನ್‌ಎಎಲ್‌ ಮತ್ತು ಮೆಸ್ಕೊ ಏರೋಸ್ಪೇಸ್‌ ಒಪ್ಪಂದಕ್ಕೆ ಸಹಿ ಮಾಡಿವೆ.

 ಜಂಟಿ ಸಹಭಾಗಿತ್ವದ ಮೊದಲ ವಿಮಾನ ಮುಂದಿನ 11 ರಿಂದ 13 ತಿಂಗಳಲ್ಲಿ ತಯಾರಾಗಲಿದೆ. 2020 ರ ಮಾರ್ಚ್‌ನಲ್ಲಿ ವಿಮಾನದ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪ್ರಮಾಣೀಕರಣ ನೀಡಲಿದೆ.

ಮೆಸ್ಕೊ ಏರೊಸ್ಪೇಸ್‌ ಭಾರತ ಮತ್ತು ವಿದೇಶಗಳಲ್ಲಿ ಹಂಸ ಎನ್‌ಜಿ ವಿಮಾನಗಳ ಸರ್ವಿಸ್‌ ಕೇಂದ್ರಗಳನ್ನು ತೆರೆಯಲಿದೆ. ವಿದೇಶಗಳಿಗೆ ರಫ್ತು ಮಾಡುವ ಉದ್ದೇಶವೂ ಇದೆ. ಸಿಎಸ್‌ಐಆರ್‌– ಎನ್‌ಎಎಲ್‌ 2001 ರಿಂದ 2010 ರ ಅವಧಿಯಲ್ಲಿ ಒಟ್ಟು 14 ಹಂಸ–3 ವಿಮಾನಗಳನ್ನು ತಯಾರಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ 11, ಐಐಟಿ–ಕಾನ್ಪುರಕ್ಕೆ 1, ಸಿಎಸ್‌ಐಆರ್‌–ಎನ್‌ಎಲ್‌ಗೆ 2 ಮತ್ತು ಮೆಸ್ಕೊ ಏರೊಸ್ಪೇಸ್‌ಗೆ 1 ವಿಮಾನವನ್ನು ಹಸ್ತಾಂತರಿಸಿದೆ. ಈಗ ಅಭಿವೃದ್ಧಿಪಡಿಸುತ್ತಿರುವ ವಿಮಾನ ಹಂಸ–3 ಗಿಂತಲೂ ಉನ್ನತ ದರ್ಜೆಯದು ಎಂದು ಸಿಎಸ್‌ಐಆರ್‌–ಎನ್‌ಎಎಲ್‌ ಮತ್ತು ಮೊಸ್ಕೊ ಏರೋಸ್ಪೇಸ್‌ ತಿಳಿಸಿವೆ.