75 ಲಕ್ಷ ಹೊಸ ತೆರಿಗೆದಾರರು ಸೃಷ್ಟಿ

0
310

ಪ್ರಸಕ್ತ ಹಣಕಾಸು ವರ್ಷದ ಈ ತನಕ 75 ಲಕ್ಷ ಹೊಸ ತೆರಿಗೆದಾರರು ದೇಶದ ಆದಾಯ ತೆರಿಗೆ ಜಾಲಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಈ ತನಕ 75 ಲಕ್ಷ ಹೊಸ ತೆರಿಗೆದಾರರು ದೇಶದ ಆದಾಯ ತೆರಿಗೆ ಜಾಲಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ವರ್ಷದ ಮಾರ್ಚ್‌ಗೆ ಅಂತ್ಯವಾಗಲಿರುವ 2018-19ರ ಹಣಕಾಸು ವರ್ಷದೊಳಗೆ 1.25 ಕೋಟಿ ಹೊಸ ತೆರಿಗೆದಾರರನ್ನು ತೆರಿಗೆ ವ್ಯಾಪ್ತಿಗೆ ತರುವ ಗುರಿಯನ್ನು ಹೊಂದಲಾಗಿದ್ದು, ಈ ಸಂಬಂಧ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ ) ನಿರ್ದೇಶನಗಳನ್ನು ನೀಡಿದೆ. 

ಸಿಬಿಡಿಟಿ ನಿರ್ದೇಶನದನ್ವಯವೇ ತೆರಿಗೆ ವಂಚನೆ  ತಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ತರುವಲ್ಲಿ ಆದಾಯ ತೆರಿಗೆ ಇಲಾಖೆ ಯಶಸ್ಸನ್ನು ಪಡೆದಿದೆ. ಹಣಕಾಸು ವರ್ಷದ ಅಂತ್ಯಕ್ಕೆ 1.25 ಕೋಟಿ ಜನರು ಆದಾಯ ತೆರಿಗೆದಾರರಾಗಲಿದ್ದಾರೆ. ಈ ಗುರಿ ಸಾಧಿಸಲು ಕೆಲವೇ ತಿಂಗಳು ಬಾಕಿ ಉಳಿದಿವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. 

2017-18ರಲ್ಲಿ 1.06 ಕೋಟಿ ಜನರು ತೆರಿಗೆ ಜಾಲಕ್ಕೆ ಸೇರ್ಪಡೆಯಾಗಿದ್ದರು.