7 ವರ್ಷದ ಹುಡುಗ 13.48 ಸೆಕೆಂಡುಗಳಲ್ಲಿ 100 ಮೀಟರ್‌ ಓಡಿ, ವಿಶ್ವ ದಾಖಲೆ!

0
1013

ಜಗತ್ತಿಗೆ ನೂತನ ಉಸೈನ್‌ ಬೋಲ್ಟ್‌ ಪರಿಚಿತರಾಗಿದ್ದಾರೆ!, ಹೌದು ಅತ್ಯಂತ ವೇಗದ ಓಟದ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಉಸೈನ್‌ ಬೋಲ್ಟ್‌ಗೆ ಸ್ಪರ್ಧೆಯೊಡ್ಡಲು 7ರ ಪೋರ ಸಿದ್ಧಗೊಳ್ಳುತ್ತಿದ್ದಾನೆ! ರುಡಾಲ್ಫ್‌ ಇನ್‌ಗ್ರಾಮ್‌ ಎಂಬ 7 ವರ್ಷದ ಹುಡುಗ ಕೇವಲ 13.48 ಸೆಕಂಡುಗಳಲ್ಲಿ 100 ಮೀಟರ್‌ ಓಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ.

ವಾಷಿಂಗ್ಟನ್‌: ಜಗತ್ತಿಗೆ ನೂತನ ಉಸೈನ್‌ ಬೋಲ್ಟ್‌ ಪರಿಚಿತರಾಗಿದ್ದಾರೆ!, ಹೌದು ಅತ್ಯಂತ ವೇಗದ ಓಟದ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ಉಸೈನ್‌ ಬೋಲ್ಟ್‌ಗೆ ಸ್ಪರ್ಧೆಯೊಡ್ಡಲು 7ರ ಪೋರ ಸಿದ್ಧಗೊಳ್ಳುತ್ತಿದ್ದಾನೆ! 

ರುಡಾಲ್ಫ್‌ ಇನ್‌ಗ್ರಾಮ್‌ ಎಂಬ 7 ವರ್ಷದ ಹುಡುಗ ಕೇವಲ 13.48 ಸೆಕಂಡುಗಳಲ್ಲಿ 100 ಮೀಟರ್‌ ಓಡುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ.

ಅಂದಹಾಗೆ ಉಸೈನ್‌ ಬೋಲ್ಟ್‌ ನಿರ್ಮಿಸಿರುವ ಮೈಲಿಗಲ್ಲು 9.58 ಸೆಕೆಂಡುಗಳಿಗೆ 7ರ ಪೋರ ನಿರ್ಮಿಸಿರುವ ದಾಖಲೆಯೇನು ಹೆಚ್ಚು ಅಂತರವಿಲ್ಲ. ಹಾಗಾಗಿ ಭವಿಷ್ಯದಲ್ಲಿ ಉಸೈನ್‌ ಬೋಲ್ಟ್‌ ದಾಖಲೆಯನ್ನು ರುಡಾಲ್ಫ್‌ ಮುರಿಯುತ್ತಾನೆ ಎಂದು ಕ್ರೀಡಾ ವಿಶ್ಲೇಷಕರು ಹೇಳುತ್ತಿದ್ದಾರೆ. 

ಅಮೆರಿಕದಲ್ಲಿ ಫುಟ್‌ಬಾಲ್‌ ಕ್ರೀಡೆಯಲ್ಲಿ ಮಿಂಚುತ್ತಿರುವ ರುಡಾಲ್ಫ್‌ ಸಾಧನೆಗೆ ಅತ್ಯಂತ ಪರಿಶ್ರಮ ಹಾಕುತ್ತಿದ್ದಾನೆ. ಬ್ಲೇಜ್‌ ಎಂಬ ಹೆಸರಿನಲ್ಲಿ ರುಡಾಲ್ಫ್‌ ಗುರುತಿಸಿಕೊಳ್ಳುತ್ತಿದ್ದು, ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾನೆ. 

ಕಳೆದ 2 ಅಮೆಚ್ಯುರ್‌ ಅಥ್ಲೇಟಿಕ್‌ ಯೂನಿಯನ್‌ (ಎಎಯು) ಟೂರ್ನಿಗಳಲ್ಲಿ ರುಡಾಲ್ಫ್‌ ಇನ್‌ಗ್ರಾಮ್‌ 20 ಚಿನ್ನದ ಪದಕಗಳು ಸೇರಿದಂತೆ ಒಟ್ಟು 36 ಪದಕಗಳನ್ನು ಗೆದ್ದಿರುವ ಸಾಧನೆ ಮಾಡಿದ್ದಾನೆ.