7 ದೇಶಗಳಿಂದ ಫೇಸ್​ಬುಕ್ ವಿಚಾರಣೆ

0
419

ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಹಾಗೂ ರಾಜಕೀಯ ಹಸ್ತಕ್ಷೇಪ ಪ್ರಕರಣದ ಸಂಬಂಧ 7 ರಾಷ್ಟ್ರಗಳ ಸಂಸದರ ಸಮಿತಿಯಿಂದ ಫೇಸ್​ಬುಕ್ ವಿಚಾರಣೆ ಎದುರಿಸಬೇಕಿದೆ. ಬ್ರಿಟನ್, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಐರ್ಲೆಂಡ್ ಹಾಗೂ ಸಿಂಗಾಪುರದ ಸಂಸತ್ ಸದಸ್ಯರನ್ನು ಒಳಗೊಂಡ 22 ಸದಸ್ಯರ ಅಂತಾರಾಷ್ಟ್ರೀಯ ಸಮಿತಿಯು ಮುಂದಿನ ವಾರದಿಂದ ಸಿಂಗಾಪುರದಲ್ಲಿ ವಿಚಾರಣೆ ಆರಂಭಿಸುತ್ತಿದೆ.

ಸ್ಯಾನ್​ಫ್ರಾನ್ಸಿಸ್ಕೊ: ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಹಾಗೂ ರಾಜಕೀಯ ಹಸ್ತಕ್ಷೇಪ ಪ್ರಕರಣದ ಸಂಬಂಧ 7 ರಾಷ್ಟ್ರಗಳ ಸಂಸದರ ಸಮಿತಿಯಿಂದ ಫೇಸ್​ಬುಕ್ ವಿಚಾರಣೆ ಎದುರಿಸಬೇಕಿದೆ.

ಬ್ರಿಟನ್, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಐರ್ಲೆಂಡ್ ಹಾಗೂ ಸಿಂಗಾಪುರದ ಸಂಸತ್ ಸದಸ್ಯರನ್ನು ಒಳಗೊಂಡ 22 ಸದಸ್ಯರ ಅಂತಾರಾಷ್ಟ್ರೀಯ ಸಮಿತಿಯು ಮುಂದಿನ ವಾರದಿಂದ ಸಿಂಗಾಪುರದಲ್ಲಿ ವಿಚಾರಣೆ ಆರಂಭಿಸುತ್ತಿದೆ.

ಈ ಸಮಿತಿಯ ಎಲ್ಲ ಪ್ರಶ್ನೆಗಳಿಗೆ ಕಂಪನಿ ಮುಖ್ಯಸ್ಥ ಹಾಗೂ ಸಿಇಒ ಜುಕರ್​ಬರ್ಗ್ ನೇತೃತ್ವದ ತಂಡ ಉತ್ತರಿಸಬೇಕಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆಗೆ ಫೇಸ್​ಬುಕ್ ಅಧ್ಯಕ್ಷ ಮಾರ್ಕ್ ಜುಕರ್​ಬರ್ಗ್ ಆಸಕ್ತಿ ತೋರಿದ್ದರು. ಆದರೆ ಇದನ್ನು ಸಮಿತಿ ತಿರಸ್ಕರಿಸಿದೆ. ಈ ಹಿನ್ನೆಲೆ ಕಂಪನಿಯ ತಂಡ ಯುರೋಪ್​ನ ಉಪಾಧ್ಯಕ್ಷ ರಿಚರ್ಡ್ ಅಲಾನ್ ಅವರ ಎದುರು ಹಾಜರಾಗಬೇಕಿದೆ.

ಇತ್ತೀಚಿಗೆ ನ್ಯೂಯಾರ್ಕ್

ಟೈಮ್ಸ್​ನ ತನಿಖಾ ವರದಿಯ ಬಗೆಗೂ ಸಭೆಯಲ್ಲಿ ರ್ಚಚಿಸಲಾಗುವ ಸಾಧ್ಯತೆಯಿದೆ. ಪ್ರತಿಸ್ಪರ್ಧಿ ಕಂಪನಿಗಳ ವಿರುದ್ಧ ಸುಳ್ಳು ಸುದ್ದಿ ಹಾಗೂ ರಷ್ಯಾದ ಹೇಟ್ ಕ್ಯಾಂಪೇನ್​ನಲ್ಲಿ ಫೇಸ್​ಬುಕ್ ಕೂಡ ಭಾಗಿಯಾಗಿದೆ ಎನ್ನುವ ವಿಚಾರ ತನಿಖಾ ವರದಿಯಲ್ಲಿ ಪ್ರಕಟವಾಗಿತ್ತು. ಈ ವಿಚಾರವು ಫೇಸ್​ಬುಕ್​ನ ಹೂಡಿಕೆದಾರರಲ್ಲಿಯೂ ಆತಂಕ ಮೂಡಿಸಿತ್ತು. ಪರಿಣಾಮ ಜುಕರ್​ಬರ್ಗ್ ಕಂಪನಿಯ ಮುಖ್ಯಸ್ಥ ಹುದ್ದೆ ತ್ಯಜಿಸಿ ಕೇವಲ ಸಿಇಒ ಆಗಿ ಮುಂದುವರಿಯಲಿ ಎಂಬ ಆಗ್ರಹ ಕೇಳಿಬಂದಿತ್ತು.