66 ವರ್ಷಗಳಿಂದ ಬಿಟ್ಟಿದ್ದ ಗಿನ್ನೆಸ್​ ದಾಖಲೆಯ ಉಗುರು ಕತ್ತರಿಸಲು ಒಪ್ಪಿಕೊಂಡ “ಶ್ರೀಧರ್​ ಚಿಲ್ಲಾಲ್”

0
33

ಸತತ 66 ವರ್ಷಗಳಿಂದ ಉಗುರನ್ನು ಕತ್ತರಿಸದೆ ಗಿನ್ನೆಸ್​ ದಾಖಲೆ ನಿರ್ಮಿಸಿದ್ದ ಹಿರಿಯ ನಾಗರಿಕ ಶ್ರೀಧರ್​ ಚಿಲ್ಲಾಲ್​ ಇದೀಗ ತಮ್ಮ ಉದ್ದನೆಯ ಉಗುರುಗಳನ್ನು ಕಟ್​ ಮಾಡಲು ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಟೈಮ್ಸ್​ ಸ್ಕ್ವಾರ್​ನ ಮ್ಯೂಸಿಯಂನಲ್ಲಿ ಉಗುರು ಕತ್ತರಿಸುವ ಸಮಾರಂಭವನ್ನು ಇಂದು(ಜುಲೈ 11,2018) ಆಯೋಜಿಸಲಾಗಿತ್ತು.

ನ್ಯೂಯಾರ್ಕ್​: ಸತತ 66 ವರ್ಷಗಳಿಂದ ಉಗುರನ್ನು ಕತ್ತರಿಸದೆ ಗಿನ್ನೆಸ್​ ದಾಖಲೆ ನಿರ್ಮಿಸಿದ್ದ ಹಿರಿಯ ನಾಗರಿಕ ಶ್ರೀಧರ್​ ಚಿಲ್ಲಾಲ್​ ಇದೀಗ ತಮ್ಮ ಉದ್ದನೆಯ ಉಗುರುಗಳನ್ನು ಕಟ್​ ಮಾಡಲು ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಟೈಮ್ಸ್​ ಸ್ಕ್ವಾರ್​ನ ಮ್ಯೂಸಿಯಂನಲ್ಲಿ ಉಗುರು ಕತ್ತರಿಸುವ ಸಮಾರಂಭವನ್ನು ಇಂದು(ಜುಲೈ 11,2018) ಆಯೋಜಿಸಲಾಗಿತ್ತು.

ಶ್ರೀಧರ್​ ಮೂಲತಃ ಭಾರತದವರಾಗಿದ್ದು ಈಗ 82 ವರ್ಷ ವಯಸ್ಸಾಗಿದೆ. ತಮ್ಮ ಎಡಗೈನ ಉಗುರನ್ನು 1952ರಿಂದಲೂ ಕತ್ತರಿಸಿರಲಿಲ್ಲ. ಇದರಿಂದ ಅವರ ಉಗುರುಗಳು ಸುಮಾರು 909.6 ಸೆಂಟಿ ಮೀಟರ್​ಗಳಷ್ಟು ಉದ್ದ ಬೆಳೆದಿವೆ. ಹೆಬ್ಬೆರಳಿನ ಉಗುರು 197.8 ಸೆಂಟಿ ಮೀಟರ್​ಗಳಷ್ಟು ಬೆಳೆದಿದೆ. ಈ ಉದ್ದನೆಯ ಉಗುರುಗಳು 2016ರಲ್ಲಿ ಗಿನ್ನೆಸ್​ ದಾಖಲೆ ಮಾಡಿದ್ದವು.

ಅಂತೂ ಉದ್ದುದ್ದ ಉಗುರುಗಳನ್ನು ಬಿಟ್ಟುಕೊಂಡಿದ್ದ ಶ್ರೀಧರ್ ಒಂದೇ ಕೈಯಲ್ಲಿ ಕೆಲಸಗಳನ್ನು ಮಾಡಿಕೊಳ್ಳಬೇಕಾಗಿತ್ತು. ಇನ್ನು ಉಗುರು ಕತ್ತರಿಸಿದ ಬಳಿಕ ಸಹಜ ಜೀವನ ನಡೆಸಬಹುದಾಗಿದೆ.