6ನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿ ಗೆದ್ದ ಮೆಸ್ಸಿ

0
11

ವಿಶ್ವ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಆರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ಆರನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ಯಾರಿಸ್‌: ವಿಶ್ವ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಆರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ಆರನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಲಿವರ್‌ಪೂಲ್‌ನಿಂದ ನಾಮ ನಿರ್ದೇಶಿತಗೊಂಡಿದ್ದ ನಾಲ್ವರನ್ನು ಹಿಂದಿಕ್ಕಿದ ಮೆಸ್ಸಿ ಈ ಗೌರವ ಸ್ವೀಕರಿಸಿದರು.

ವಿಶ್ವಕಪ್‌ ವಿಜೇತ ಅಮೆರಿಕದ “ಮೇಗನ್‌ ರಾಪಿನೊಯ್‌” ಅವರಿಗೆ ಮಹಿಳಾ ವಿಭಾಗದ ಪ್ರಶಸ್ತಿ ಒಲಿದಿದೆ.

ಮೆಸ್ಸಿ ನಾಯಕತ್ವದಲ್ಲಿ ಬಾರ್ಸಿಲೋನ ತಂಡ  ಲಾ ಲೀಗಾ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.  ಆಜಿಲ್ ನಲ್ಲಿ ನಡೆದಿದ್ದ ಕೊಪಾ ಅಮೆರಿಕಾ ಟೂರ್ನಿಯಲ್ಲಿ ಅರ್ಜೆಂಟೀನಾ ಮೂರನೇ ಸ್ಥಾನ ಪಡೆದಿತ್ತು.. ಈ ಹಿಂದೆ 2009, 2010, 2011, 2012 ಹಾಗೂ 2015ರಲ್ಲಿ ಮೆಸ್ಸಿ ಬ್ಯಾಲನ್‌ ಡಿ ಓರ್‌ ಪ್ರಶಸ್ತಿಗೆ ಪಾತ್ರರಾಗಿದ್ದರು.  ರೊನಾಲ್ಡೊ ಐದು ಬಾರಿ ಬ್ಯಾಲನ್‌ ಡಿ ಒರ್‌ ಒಡೆಯರಾಗಿದ್ದಾರೆ.

ಮೆಸ್ಸಿ ಅವರು ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಪ್ರತಿಸ್ಪರ್ಧಿ ವರ್ಜಿಲ್‌ ವ್ಯಾನ್‌ ಡಿಕ್‌ ಹಾಗೂ ಐದು ಬಾರಿ ಪ್ರಶಸ್ತಿ ಜಯಿಸಿದ್ದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಹಿಂದಿಕ್ಕಿದ್ದಾರೆ.

10 ವರ್ಷಗಳ ಹಿಂದೆ ಮೂವರು ಸಹೋದರರ ಮಾರ್ಗದರ್ಶನದ ಫ‌ಲವಾಗಿ ನಾನು ಮೊದಲ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿ ಸ್ವೀಕರಿಸಿದ್ದರು. ಇಂದು ಪತ್ನಿ ಹಾಗೂ ಮಕ್ಕಳ ಬೆಂಬಲದಿಂದಾಗಿ ಆರನೇ ಬಾರಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ’ಎಂದು ಮೆಸ್ಸಿ ಹೇಳಿದ್ದಾರೆ.