5 ಜಿ ಸಂಪರ್ಕಕ್ಕೆ ಹೊಸ ಸಂಶೋಧನೆ ಕೇಂದ್ರ ಸ್ಥಾಪಿಸಿದ ನೊಕಿಯಾ

0
18

ಫಿನ್ನಿಷ್ ಬಹುರಾಷ್ಟ್ರೀಯ ಕಂಪನಿ ನೋಕಿಯಾ ಬೆಂಗಳೂರಿನಲ್ಲಿ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಆರಂಭಿಸಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಆರಂಭಿಸಲಾಗಿರುವ ಈ ಕಂಪೆನಿ 16,000 ಚದರಡಿ ವಿಸ್ತೀರ್ಣದಲ್ಲಿದೆ. ವಾಯ್ಸ್ ಓವರ್ ಎಲ್ ಟಿಇ(ವೊಲ್ಟ್) ಮತ್ತು ಅಪ್ಲಿಕೇಶನ್ ನ ಅಭಿವೃದ್ಧಿ ಮಾತ್ರವಲ್ಲದೆ 5 ಜಿ ನೆಟ್ ವರ್ಕ್ ಮತ್ತು ದೊಡ್ಡ ಡಾಟಾಗಳ ಸಂಶೋಧನೆಗೆ ಈ ಕೇಂದ್ರ ಮೀಸಲಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನೊಕಿಯಾ ಭಾರತೀಯ ಮಾರುಕಟ್ಟೆಯ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಸಂಜಯ್ ಮಲಿಕ್, ಜಾಗತಿಕ ಮಟ್ಟದಲ್ಲಿ ಕಂಪೆನಿಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಾರಾಟ ಮತ್ತು ಸಂಶೋಧನೆ ದೃಷ್ಟಿಕೋನದಲ್ಲಿ ನೊಕಿಯಾಗೆ ಭಾರತ ಕಾರ್ಯತಂತ್ರದ ಮಾರುಕಟ್ಟೆಯನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಐಟಿ, ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ನೋಕಿಯಾ ಕಂಪೆನಿ ಕರ್ನಾಟಕದಲ್ಲಿ ಈಗಾಗಲೇ 6,000 ಸಿಬ್ಬಂದಿಗಳನ್ನು ನೇಮಿಸಿಕೊಂಡಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದರು.
 
 
ತಾಂತ್ರಿಕ ಕೇಂದ್ರದ ಮುಖ್ಯಸ್ಥ ರೂಪಾ ಸಂತೋಷ್ ಮಾತನಾಡಿ, ಭಾರತದಲ್ಲಿ ನಮ್ಮ ಕಂಪೆನಿಯ ಕಾರ್ಯತಂತ್ರದ ವಿಸ್ತರಣೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಸ್ಥಳೀಯ ಪ್ರತಿಭೆಗಳ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು ಆಗಿದೆ ಎಂದರು.
 
ಮುಂದೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಕೆಲಸ ಮಾಡಲು ಪ್ರತಿಭಾವಂತ ಎಂಜಿನಿಯರ್ ಗಳಿಗೆ ಸಂಶೋಧನಾ ಕೇಂದ್ರದಲ್ಲಿ ಅಪಾರ ಅವಕಾಶ ನೀಡಲಾಗುವುದು ಎಂದರು. 5 ಜಿ ನೆಟ್ ವರ್ಕ್ ಅಭಿವೃದ್ಧಿಗೆ ನೊಕಿಯಾ ಭಾರ್ತಿ ಏರ್ ಟೆಲ್ ಮತ್ತು ಬಿಎಸ್ ಎನ್ ಎಲ್ ಜೊತೆ ಸಹಭಾಗಿತ್ವ ಹೊಂದಿದೆ.