40ನೇ ಜನ್ಮದಿನವನ್ನಾಚರಿಸಿಕೊಂಡ ಭಾರತದ ಮೊದಲ ಪ್ರನಾಳ ಶಿಶು “ದುರ್ಗಾ”

0
1213

ದೇಶದ ಮೊದಲ ಪ್ರನಾಳ ಶಿಶು ಸೃಷ್ಟಿಸಿದ ಹೆಗ್ಗಳಿಕೆ ಡಾ.ಸುಭಾಷ್ ಅವರಿಗೆ ಸಲ್ಲುತ್ತದೆ. ವಿಶ್ವದ ಮೊದಲ ಪ್ರನಾಳ ಶಿಶು ‘ಲೂಯಿಸ್ ಬ್ರೌನ್’ ಜನಿಸಿದ 67 ದಿನಗಳ ಅಂತರದಲ್ಲಿ ಭಾರತದಲ್ಲಿ 1978 ಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ ‘ದುರ್ಗಾ’ ಜನಿಸಿದ್ದರು.

ಪುಣೆ: ಭಾರತದ ಮೊದಲ ಮತ್ತು ವಿಶ್ವದ ಎರಡನೆಯ  ಪ್ರನಾಳ ಶಿಶುದುರ್ಗಾ ಅಲಿಯಾಸ್ ಕಾನುಪ್ರಿಯಾ ಅಗರ್ವಾಲ್ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 

ದೇಶದ ಮೊದಲ ಪ್ರನಾಳ ಶಿಶು ಸೃಷ್ಟಿಸಿದ ಹೆಗ್ಗಳಿಕೆ ಡಾ.ಸುಭಾಷ್ ಅವರಿಗೆ ಸಲ್ಲುತ್ತದೆ. ವಿಶ್ವದ ಮೊದಲ ಪ್ರನಾಳ ಶಿಶು ‘ಲೂಯಿಸ್ ಬ್ರೌನ್’ ಜನಿಸಿದ 67 ದಿನಗಳ ಅಂತರದಲ್ಲಿ ಭಾರತದಲ್ಲಿ 1978 ಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ ‘ದುರ್ಗಾ’ ಜನಿಸಿದ್ದರು. 
ಪುಣೆಯಲ್ಲಿ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ದುರ್ಗಾ, ಶನಿವಾರ ತಮ್ಮ ಜನ್ಮದಿನವನ್ನಾಚರಿಸಿಕೊಂಡರು.ಪ್ರೊಫೆಸರ್ ಸುನಿತ್ ಕುಮಾರ್ ಮುಖರ್ಜಿ ಕೂಡ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಐಎಮ್ಎ ಹಾಲ್‌ನಲ್ಲಿ ನಡೆದ ದುರ್ಗಾ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರು ದುರ್ಗಾ ಸೃಷ್ಟಿ ಮಾಡುವಾಗ ಡಾ ಸುಭಾಷ್ ಮುಖರ್ಜಿ ಅವರಿಗೆ ಸಾಥ್ ನೀಡಿದ ಭ್ರೂಣಶಾಸ್ತ್ರಜ್ಞರಾಗಿದ್ದಾರೆ. 

ಮಕ್ಕಳಿಲ್ಲದವರ ಪಾಲಿಗೆ ‘ಪ್ರನಾಳ ಶಿಶು’ ವಿಧಾನ ವರವಾಗಿದೆ. ಹೆಣ್ಣು-ಗಂಡಿನಿಂದ ಪಡೆದ ಅಂಡಾಣು ಮತ್ತು ವೀರ್ಯಾಣುವನ್ನು ಸಂಧಿಸುವಂತೆ ಮಾಡಿ ಭ್ರೂಣದ ಆರಂಭದ ಅವಸ್ಥೆಯನ್ನು ಸೃಷ್ಟಿಸಲಾಗುತ್ತದೆ. ಹೀಗೆ ಪ್ರಯೋಗಾಲಯದಲ್ಲಿಯೇ ಭ್ರೂಣದ ಪ್ರಾರಂಭಿಕ ಸ್ಥಿತಿ ರೂಪುಗೊಳ್ಳುವುದರಿಂದ ಈ ಪ್ರಕ್ರಿಯೆಗೆ ಪ್ರನಾಳ ಶಿಶು ಎಂದು ಹೆಸರು. ಅಂಡಾಣು-ವೀರ್ಯಾಣು ಸಂಯೋಗದ ಬಳಿಕ ಅದನ್ನು ಗರ್ಭಕ್ಕೆ ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಯಶಸ್ವಿಯಾದಲ್ಲಿ ಗರ್ಭಿಣಿಯಾಗುವ ಮಹಿಳೆ ಸಹಜ ಮಗುವನ್ನು ಪಡೆಯುತ್ತಾಳೆ.