3000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಒಪ್ಪಿಗೆ

0
517

ಸುಮಾರು 3000 ಕೋಟಿ ರೂ. ಮೌಲ್ಯದ ಎರಡು ಯುದ್ಧ ನೌಕೆಗಳಿಗೆ ಬ್ರಹ್ಮೋಸ್​ ಕ್ಷಿಪಣಿ ಮತ್ತು ಅರ್ಜುನ ಟ್ಯಾಂಕ್​ನ ಆರ್ಮರ್ಡ್​ ರಿಕವರಿ ವೆಹಿಕಲ್​ಗಳನ್ನು ಕೊಳ್ಳಲು ಕೇಂದ್ರ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ನವದೆಹಲಿ: ಸುಮಾರು 3000 ಕೋಟಿ ರೂ. ಮೌಲ್ಯದ ಎರಡು ಯುದ್ಧ ನೌಕೆಗಳಿಗೆ ಬ್ರಹ್ಮೋಸ್​ ಕ್ಷಿಪಣಿ ಮತ್ತು ಅರ್ಜುನ ಟ್ಯಾಂಕ್​ನ ಆರ್ಮರ್ಡ್​ ರಿಕವರಿ ವೆಹಿಕಲ್​ಗಳನ್ನು ಕೊಳ್ಳಲು ಕೇಂದ್ರ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (ಡಿಎಸಿ)ಯ ಸಭೆಯಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ಧಾರೆ.

ಭಾರತೀಯ ನೌಕಾಪಡೆಗಾಗಿ ನಿರ್ಮಿಸುತ್ತಿರುವ ಎರಡು ಯುದ್ಧ ನೌಕೆಗಳಲ್ಲಿ ಸ್ವದೇಶಿ ನಿರ್ಮಿತ ಬ್ರಹ್ಮೋಸ್​ ಕ್ಷಿಪಣಿಗಳನ್ನು ಅಳವಡಿಸಲು ಕ್ಷಿಪಣಿ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಬ್ರಹ್ಮೋಸ್​ ಕ್ಷಿಪಣಿಯನ್ನು ಈಗಾಗಲೇ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದರ ಜತೆಯಲ್ಲೇ ಡಿಆರ್​ಡಿಒ ಅಭಿವೃದ್ಧಿ ಪಡಿಸಿರುವ ಆರ್ಮರ್ಡ್​ ರಿಕವರಿ ವೆಹಿಕಲ್​ಗಳನ್ನು ಕೊಳ್ಳಲು ಒಪ್ಪಿಗೆ ನೀಡಲಾಗಿದೆ. ಇವುಗಳನ್ನು ಸರ್ಕಾರಿ ಸ್ವಾಮ್ಯದ ಬಿಇಎಂಎಲ್​ ಕಂಪನಿಯಲ್ಲಿ ತಯಾರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.