3 ಲಕ್ಷ ಬಟ್ಟೆ ಸಂಗ್ರಹ: ಲಕ್ಷ್ಯರಾಜ್‌ ಸಿಂಗ್ ಮೇವಾಡ್‌ ಗಿನ್ನಿಸ್‌ ದಾಖಲೆ

0
422

ರಾಜಸ್ಥಾನದ ಉದಯಪುರದ ರಾಜಮನೆತನದ ವ್ಯಕ್ತಿಯೊಬ್ಬರು ಆರಂಭಿಸಿದ ‘ಬಟ್ಟೆ ಸಂಗ್ರಹ ಅಭಿಯಾನ’ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿದೆ. ಮೂರು ಲಕ್ಷಕ್ಕೂ ಹೆಚ್ಚು ಬಟ್ಟೆಗಳನ್ನು ಇವರು ಸಂಗ್ರಹಿಸಿ ಅಗತ್ಯವಿರುವವರಿಗೆ ದಾನ ಮಾಡಿದ್ದಾರೆ. ಇದು ಅತಿದೊಡ್ಡ ಬಟ್ಟೆ ಸಂಗ್ರಹ ಎಂಬ ಕೀರ್ತಿಗೆ ಭಾಜನವಾಗಿದೆ. ವಸ್ತ್ರದಾನ ಎಂಬ ಅಭಿಯಾನದ ಮೂಲಕ ಇವರು ಬಟ್ಟೆಗಳನ್ನು ಸಂಗ್ರಹ ಮಾಡಿದ್ದರು.

ರಜಪೂತ್‌ ರಾಜ ಮಹಾರಾಣ ಪ್ರತಾಪ್‌ ಸಂಬಂಧಿಯಾಗಿರುವ ಲಕ್ಷ್ಯರಾಜ್‌ ಸಿಂಗ್ ಮೇವಾಡ್‌ ಈ ಸಾಧನೆ ಮಾಡಿದವರು. ಉದಯಪುರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಗಿನ್ನಿಸ್‌ ದಾಖಲೆಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

ದಾನ ಮಾಡಲು ಹೊಸ ರೀತಿಯ ಉಪಕ್ರಮದ ರೀತಿಯಲ್ಲಿ ಈ ಕೆಲಸವನ್ನು ಆರಂಭಿಸಿದೆ. ಈ ಅಭಿಯಾನಕ್ಕೆ ಕೆಲವು ಸಂಘಟನೆಗಳು ಧನಸಹಾಯ ಮಾಡಬೇಕು ಎಂದು ಬಯಸಿದ್ದೇನೆ. ನಾಗರಿಕರು, ವಿಶೇಷವಾಗಿ ನಗರದ ಯುವಕ–ಯುವತಿಯರು ದಾನ ಮಾಡುವುದರಲ್ಲಿ ತಾವೇನು ಕಡಿಮೆ ಇಲ್ಲ ಎಂಬಂತೆ ಸಹಾಯ ಮಾಡಿದ್ದಾರೆ.

# ಸಂಗ್ರಹವಾದ ಬಟ್ಟೆಗಳು : 3,29,250

# ಬಟ್ಟೆಯನ್ನು ದಾನ ಮಾಡಿದವರ ಸಂಖ್ಯೆ : 76,000

ಬಟ್ಟೆಯನ್ನು ದಾನ ಪಡೆದವರು

# 120ಕ್ಕೂ ಹೆಚ್ಚು ಶಾಲೆಗಳು

15ಕ್ಕೂ ಹೆಚ್ಚು ಕಾಲೇಜುಗಳು

#  30ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು