3ನೇ ಬಾರಿಗೆ 2018 ರ ಅಮೆರಿಕಾ ಓಪನ್ ಕಿರೀಟ ಮುಡಿಗೇರಿಸಿಕೊಂಡ” ಜೊಕೊವಿಕ್‌”

0
675

ಅರ್ಜೆಂಟೀನಾದ ಜುವಾನ್‌ ಡೆಲ್‌ ಪೊಟ್ರೊ ಅವರನ್ನು ಮಣಿಸುವ ಮೂಲಕ ಸರ್ಬಿಯಾದ ನೊವಾಕ್ ಜೊಕೊವಿಕ್‌ ಅಮೆರಿಕ ಓಪನ್ ಟೆನಿಸ್ ಕಿರೀಟ್ ಮುಡಿಗೇರಿಸಿಕೊಂಡಿದ್ದಾರೆ.

ನ್ಯೂ ಯಾರ್ಕ್: ಅರ್ಜೆಂಟೀನಾದ ಜುವಾನ್‌ ಡೆಲ್‌ ಪೊಟ್ರೊ ಅವರನ್ನು ಮಣಿಸುವ ಮೂಲಕ ಸರ್ಬಿಯಾದ ನೊವಾಕ್ ಜೊಕೊವಿಕ್‌ ಅಮೆರಿಕ ಓಪನ್ ಟೆನಿಸ್ ಕಿರೀಟ್ ಮುಡಿಗೇರಿಸಿಕೊಂಡಿದ್ದಾರೆ. 
ಸೆಪ್ಟೆಂಬರ್ 9 ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ  ಅವರು ಜುವಾನ್‌ ಡೆಲ್‌ ಪೊಟ್ರೊ ಅವರನ್ನು 6-3, 7-6, 6-3 ಅಂತರದಲ್ಲಿ ಸೋಲಿಸುವ ಮೂಲಕ ನೊವಾಕ್ ಜೊಕೊವಿಕ್‌ ಮೂರನೇ ಬಾರಿ ಅಮೆರಿಕ ಓಪನ್ ಟೆನಿಸ್ ಕಿರೀಟ್ ತನ್ನದಾಗಿಸಿಕೊಂಡಿದ್ದಾರೆ 
ಶನಿವಾರ ನಡೆದ ಎರಡು ಸೆಮಿಫೈನಲ್‌ ಪಂದ್ಯಗಳಲ್ಲಿ ಡೆಲ್‌ ಪೊಟ್ರೊ ವಿಶ್ವದ ಅಗ್ರ ಶ್ರೇಯಾಂಕದ ರಾಫೆಲ್‌ ನಡಾಲ್‌ ವಿರುದ್ಧ ಹಾಗೂ ಜೊಕೊವಿಕ್‌ ಜಪಾನ್‌ನ ಕೀ ನಿಶಿಕೊರಿ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿದ್ದರು. 

ಕಳೆದ ಆವೃತ್ತಿಯ ಚಾಂಪಿಯನ್‌ ನಡಾಲ್‌ ಮಂಡಿನೋವಿನಿಂದಾಗಿ 2ನೇ ಸೆಟ್‌ ನಡುವೆ ಸ್ಪರ್ಧೆ ಬಿಟ್ಟುಕೊಟ್ಟಿದ್ದು 3ನೇ ಶ್ರೇಯಾಂಕದ ಡೆಲ್‌ ಪೊಟ್ರೊಗೆ ವರದಾನವಾಗಿತ್ತು. ಪೊಟ್ರೊ 7-6 (7/3)ರಿಂದ ಮೊದಲ ಸೆಟ್‌ ಗೆದ್ದು 2ನೇ ಸೆಟ್‌ನಲ್ಲಿ 6-2ರ ಮುನ್ನಡೆಯಲ್ಲಿದ್ದಾಗ ನಡಾಲ್‌ಗೆ ಮೊಣಕಾಲು ನೋವು ಕಾಡಿತ್ತು. ಸ್ವಲ್ಪ ಹೊತ್ತು ಕೋರ್ಟ್‌ನಲ್ಲೇ ಕುಸಿದು ಕುಳಿತ 17 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿಗಳ ಸರದಾರ ಆ ಬಳಿಕ ಸ್ಪರ್ಧೆಯಿಂದ ನಿವೃತ್ತಿ ಹೊಂದಲು ತೀರ್ಮಾನಿಸಿದ್ದರು. 

ಯುಎಸ್‌ ಓಪನ್‌ನಲ್ಲಿ 8ನೇ ಬಾರಿಗೆ ಫೈನಲ್‌ (ಗ್ರ್ಯಾನ್‌ ಸ್ಲಾಮ್‌ನಲ್ಲಿ ಒಟ್ಟಾರೆ 23ನೆಯದು) ಪ್ರವೇಶಿಸಿದ್ದ ಜೊಕೊವಿಕ್‌ ಶನಿವಾರ ಉಪಾಂತ್ಯ ಹಣಾಹಣಿಯಲ್ಲಿ ಜಪಾನ್‌ನ ನಿಶಿಕೊರಿಯನ್ನು 6-3, 6-4, 6-2 ಸೆಟ್‌ಗಳಿಂದ ಸೋಲಿಸಿದ್ದರು. 

14ನೇ ಪ್ರಶಸ್ತಿ 
ಡೆಲ್‌ ಪೊಟ್ರೊ ಅವರನ್ನು ಮಣಿಸುವ ಮೂಲಕ 14ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದರುವ ಜೊಕೊವಿಕ್ ಅವರು ಅಮೆರಿಕದ ಮಾಜಿ ಆಟಗಾರ ಪೀಟ್‌ ಸಾಂಪ್ರಸ್‌ ಸಾಧನೆ ಸರಿಗಟ್ಟಿದ್ದಾರೆ.