26/11ರ ಮುಂಬೈ ದಾಳಿ ಸಂಚುಕೋರರ ಸುಳಿವು ನೀಡಿದವರಿಗೆ ಅಮೆರಿಕದಿಂದ 35 ಕೋಟಿ ರೂ. ಬಹುಮಾನ

0
327

ದೇಶವನ್ನೇ ನಡುಗಿಸಿದ 26/11ರ ಮುಂಬೈ ದಾಳಿ ಸಂಭವಿಸಿ ಇಂದಿಗೆ 10 ವರ್ಷಗಳಾಗಿವೆ. ಉಗ್ರ ದಾಳಿಗೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಅವರು, 2008ರ ಮುಂಬೈ ದಾಳಿಯ ಹೊಣೆಗಾರರ ವಿರುದ್ಧ ಪಾಕಿಸ್ತಾನವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ದಾಳಿಯ ಯೋಜನೆ ರೂಪಿಸಿದವರ ಮಾಹಿತಿ ನೀಡಿದರೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ವಾಷಿಂಗ್ಟನ್: ದೇಶವನ್ನೇ ನಡುಗಿಸಿದ 26/11ರ ಮುಂಬೈ ದಾಳಿ ಸಂಭವಿಸಿ ಇಂದಿಗೆ 10 ವರ್ಷಗಳಾಗಿವೆ. ಉಗ್ರ ದಾಳಿಗೆ ಹತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆ ಅವರು, 2008ರ ಮುಂಬೈ ದಾಳಿಯ ಹೊಣೆಗಾರರ ವಿರುದ್ಧ ಪಾಕಿಸ್ತಾನವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ದಾಳಿಯ ಯೋಜನೆ ರೂಪಿಸಿದವರ ಮಾಹಿತಿ ನೀಡಿದರೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಪಾಕಿಸ್ತಾನದ ಉಗ್ರರು ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮೂರು ದಿನಗಳ ಕಾಲ ನಡೆಸಿದ ಹಿಂಸಾಚಾರದಲ್ಲಿ 166 ಜನ ಮೃತಪಟ್ಟು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅದರ 10 ನೇ ವರ್ಷದ ವಾರ್ಷಿಕೋತ್ಸವವಕ್ಕೂ ಮುಂಚೆ ಅಮೆರಿಕ ಈ ಘೋಷಣೆ ಮಾಡಿದೆ.

ಇದು ಸಂತ್ರಸ್ತ ಕುಟುಂಬಗಳಿಗೆ ಅವಮಾನ ಮಾಡಿದಂತೆ. 10 ವರ್ಷವೇ ಕಳೆದರೂ ಕೂಡ ಮುಂಬೈ ದಾಳಿಗೆ ಯೋಜನೆ ರೂಪಿಸಿ ಭಾಗಿಯಾದವರಿಗೆ ಶಿಕ್ಷೆಯಾಗಿಲ್ಲ. ಹಾಗಾಗಿ ಲಷ್ಕರ್ ಎ ತೋಯ್ಬಾ ಮತ್ತು ಅದರ ಅಂಗಸಂಸ್ಥೆಗಳು ಸೇರಿದಂತೆ ದುಷ್ಕೃತ್ಯಕ್ಕೆ ಕಾರಣವಾದ ಭಯೋತ್ಪಾದಕರನ್ನು ಸದೆಬಡಿಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಿದ್ಧಪಡಿಸಿರುವ ನಿರ್ಬಂಧಗಳನ್ನು ಜಾರಿಗೊಳಿಸಲು ಎಲ್ಲ ದೇಶಗಳಿಗೂ ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಜತೆ ಚರ್ಚಿಸಲಾಗಿದೆ ಎಂದು ಪೊಂಪೆ ತಿಳಿಸಿದರು.

ಅಂದಿನ ದಾಳಿಯಲ್ಲಿ ಅಮೆರಿಕದ ನಾಗರಿಕರು ಸೇರಿದಂತೆ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂತ್ರಸ್ತರ ಕುಟುಂಬ ಮತ್ತು ಸ್ನೇಹಿತ ಜತೆಗೆ ನಿಲ್ಲುತ್ತೇವೆ ಎಂದಿದ್ದಾರೆ.

ಅಮೆರಿಕದ ರಿವಾರ್ಡ್‌ ಫಾರ್‌ ಜಸ್ಟೀಸ್‌, ಮುಂಬೈ ದಾಳಿಯ ಸಂಚು ರೂಪಿಸಿದ್ದವರು ಮತ್ತು ಅಪಾರ ಸಾವು ನೋವಿಗೆ ಕಾರಣವಾದ ಯಾವುದೇ ವ್ಯಕ್ತಿಯ ಸುಳಿವು ನೀಡಿದವರಿಗೆ 5 ಮಿಲಿಯನ್‌ ಡಾಲರ್‌ ನೀಡುವುದಾಗಿ ಘೋಷಿಸಿದೆ. (ಏಜೆನ್ಸೀಸ್)