25 ವರ್ಷ ಮೀರಿದವರೂ ನೀಟ್ ಬರೆಯಲು ಸುಪ್ರೀಂ ಅವಕಾಶ

0
481

ನೀಟ್‌ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳಿಗೆ ಸಿಬಿಎಸ್‌ಇ ನಿಗದಿಪಡಿಸಿದ್ದ 25 ವರ್ಷದ ಗರಿಷ್ಠ ವಯೋಮಿತಿಯನ್ನು ಸುಪ್ರೀಂಕೋರ್ಟ್‌ ನವೆಂಬರ್ 29 ರ ಗುರುವಾರ ರದ್ದುಪಡಿಸಿದೆ.

ಹೊಸದಿಲ್ಲಿ: ನೀಟ್‌ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳಿಗೆ  ಸಿಬಿಎಸ್‌ಇ ನಿಗದಿಪಡಿಸಿದ್ದ 25 ವರ್ಷದ ಗರಿಷ್ಠ ವಯೋಮಿತಿಯನ್ನು ಸುಪ್ರೀಂಕೋರ್ಟ್‌ ನವೆಂಬರ್ 29 ರ ಗುರುವಾರ ರದ್ದುಪಡಿಸಿದೆ. 

ಗರಿಷ್ಠ ವಯೋಮಿತಿಯನ್ನು ಇಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ದಾವೆಯ ವಿಚಾರಣೆ ನಡೆಸಿದ ಕೋರ್ಟ್‌,ಮೆಡಿಕಲ್‌ ಮತ್ತು ಡೆಂಟಲ್‌ ಕಾಲೇಜು ಪ್ರವೇಶಕ್ಕೆ ಎದುರಿಸಬೇಕಾಗಿರುವ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ನಿರ್ಧರಿಸುವ ಅಧಿಕಾರವನ್ನು ಸಿಬಿಎಸ್‌ಇಗೇ ಬಿಟ್ಟುಕೊಟ್ಟಿದೆ. 

ಇದೇ ವೇಳೆ, 2019ರ ಮೇ 5ರಂದು ನಡೆಯುವ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇದ್ದ ಕೊನೆಯ ದಿನಾಂಕ (ನವೆಂಬರ್‌ 30)ವನ್ನು ಒಂದು ವಾರ ವಿಸ್ತರಿಸಲು ಸುಪ್ರೀಂಕೋರ್ಟ್‌ ಸೂಚಿಸಿದೆ. ಇದುವರೆಗೆ ಸಿಬಿಎಸ್‌ಇ ನಡೆಸುತ್ತಿದ್ದ ಪರೀಕ್ಷೆಯನ್ನು ಮುಂದಿನ ವರ್ಷದಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಡೆಸಲಿದೆ. 

2018ರ ಮೇ 6ರಂದು ದೇಶದ 136 ನಗರಗಳಲ್ಲಿ 11 ಭಾಷೆಗಳಲ್ಲಿ ನಡೆದ ಪರೀಕ್ಷೆಯಲ್ಲಿ 13,23,672 ಅಭ್ಯರ್ಥಿಗಳು ಭಾಗವಹಿಸಿದ್ದರು.