24 ಗಣ್ಯರಿಗೆ ಝಡ್‌ ಪ್ಲಸ್‌ ಭದ್ರತೆ

0
25

ಉಗ್ರರ ದಾಳಿ ಭೀತಿ ಸೇರಿದಂತೆ ನಾನಾ ಬಗೆಯ ಸೂಕ್ಷ್ಮ ಕಾರಣಗಳಿಗಾಗಿ ಕೇಂದ್ರ ಸರಕಾರವು 308 ಗಣ್ಯರಿಗೆ ಭದ್ರತೆ ಒದಗಿಸಿದ್ದು, ಈ ಪೈಕಿ 24 ಜನರಿಗೆ ಅತ್ಯುನ್ನತ ಝಡ್‌ ಪ್ಲಸ್‌ ಭದ್ರತೆ ನೀಡಿದೆ.

ಲಖನೌ: ಉಗ್ರರ ದಾಳಿ ಭೀತಿ ಸೇರಿದಂತೆ ನಾನಾ ಬಗೆಯ ಸೂಕ್ಷ್ಮ ಕಾರಣಗಳಿಗಾಗಿ ಕೇಂದ್ರ ಸರಕಾರವು 308 ಗಣ್ಯರಿಗೆ  ಭದ್ರತೆ  ಒದಗಿಸಿದ್ದು, ಈ ಪೈಕಿ 24 ಜನರಿಗೆ ಅತ್ಯುನ್ನತ ಝಡ್‌ ಪ್ಲಸ್‌ ಭದ್ರತೆ ನೀಡಿದೆ. 

ಲಖನೌ ಮೂಲದ ಸಾಮಾಜಿಕ ಕಾರ‍್ಯಕರ್ತ ನೂತನ್‌ ಠಾಕೂರ್‌ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ‍್ಯದರ್ಶಿ ಎಸ್‌.ಸಿ.ಎಲ್‌. ದಾಸ್‌ ಅವರಿಂದ ಈ ಪ್ರತಿಕ್ರಿಯೆ ಬಂದಿದೆ. ಇದೇ ವೇಳೆ ಸಚಿವಾಲಯವು ಈ 308 ಜನರಿಗೆ ಒದಗಿಸಲಾಗಿರುವ ಭದ್ರತಾ ವ್ಯವಸ್ಥೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯ ವಿವರಗಳನ್ನು ಬಹಿರಂಗಪಡಿಸಲು ಆರ್‌ಟಿಐ ಕಾಯಿದೆಯ ವಿವಿಧ ನಿಯಮಗಳಡಿ ನಿರಾಕರಿಸಿದೆ. 24 ಗಣ್ಯರಿಗೆ ಝಡ್‌ ಪ್ಲಸ್‌, 59 ಗಣ್ಯರಿಗೆ ಝಡ್‌, 109 ಜನರಿಗೆ ವೈ ಪ್ಲಸ್‌, 34 ಮಂದಿಗೆ ವೈ ಮತ್ತು 82 ಜನರಿಗೆ ಎಕ್ಸ್‌ ಶ್ರೇಣಿ ಭದ್ರತೆ ಒದಗಿಸಲಾಗಿದೆ.