23 ಬಾರಿ ಎವರೆಸ್ಟ್ ಏರಿದ ನೇಪಾಳದ “ಕಾಮಿ ರೀಟಾ ಶೆರ್ಪಾ”

0
56

ನೇಪಾಳದ ಕಾಮಿ ರೀಟ ಶೆರ್ಪಾ ಅವರು 23ನೇ ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದು, ಪರ್ವತದ ತುತ್ತ ತುದಿಯನ್ನು ಹತ್ತಿದ ಮೊದಲ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ರೀಟ ಅವರು 22 ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದರು. ಈಗ ಆ ದಾಖಲೆಯನ್ನು ಅವರೇ ಮುರಿದಿದ್ದಾರೆ.

ಕಠ್ಮಂಡು (ಪಿಟಿಐ): ನೇಪಾಳದ ಕಾಮಿ ರೀಟಾ ಶೆರ್ಪಾ ಅವರು 23ನೇ ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದು, ಪರ್ವತದ ತುತ್ತ ತುದಿಯನ್ನು ಹತ್ತಿದ ಮೊದಲ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ರೀಟ ಅವರು 22 ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದರು. ಈಗ ಆ ದಾಖಲೆಯನ್ನು ಅವರೇ ಮುರಿದಿದ್ದಾರೆ.

49 ವರ್ಷದ ರೀಟ ಅವರು ಇತರ ಶೆರ್ಪಾಗಳೊಂದಿಗೆ ಮೇ 15 ರ ಬುಧವಾರ ಬೆಳಿಗ್ಗೆ 8,850 ಮೀಟರ್‌ ಎತ್ತರದ ತುದಿ ತಲುಪಿದ್ದಾರೆ ಎಂದು ಹಿಮಾಲಯನ್‌ ಟೈಮ್ಸ್ ವರದಿ ಮಾಡಿದೆ.

ಮೌಂಟ್ ಎವರೆಸ್ಟ್‌ನ ತುತ್ತ ತುದಿಯನ್ನು ನೇಪಾಳ ಮತ್ತು ಟಿಬೆಟ್‌ ಭಾಗದ ಕಡೆಯಿಂದ ತಲುಪಬಹುದು. ರೀಟ ಅವರು ನೇಪಾಳದ ಕಡೆಯಿಂದ ತಲುಪಿದರು ಎಂದು ಸೆವೆನ್ ಸಮಿತ್‌ ಟ್ರಕ್ಸ್‌ ಕಂಪನಿಯ ಮುಖ್ಯಸ್ಥ‌ ಮಿಂಗಾಮ ಶೆರ್ಪಾ ಹೇಳಿದ್ದಾರೆ.

ಯಾವ ವರ್ಷದಿಂದ ಮೌಂಟ್ಎವರೆಸ್ಟ್ ಶಿಖರವನ್ನು ಏರಲು ಪ್ರಾರಂಭ :   ‘ರೀಟಾ ಅವರು ಸೊಲುಖುಂಬು ಜಿಲ್ಲೆಯ ಥಾಮೆ ಗ್ರಾಮದವರು. ಚಾರಣಿಗರಿಗೆ ತರಬೇತುದಾರರಾಗಿ ಕೆಲಸ ಮಾಡುವ ಅವರು 1994ರಿಂದ ಮೌಂಟ್ಎವರೆಸ್ಟ್ ಏರುತ್ತಿರುವ ಸಾಹಸಿಗ. 1995ರಲ್ಲಿ ಪರ್ವತಾರೋಹಿಗಳ ಹತ್ಯೆ ನಡೆದ ನಂತರ ಸೆವೆನ್ ಸಮಿತ್‌ ಟ್ರಕ್ಸ್‌ ಕಂಪೆನಿ ಸಹ ತನ್ನ ಸೇವೆ ನಿಲ್ಲಿಸಿತ್ತು. 2017 ರಲ್ಲಿಯೇ ಕಾಮಿ ಅವರು 21 ಬಾರಿ ಎವರೆಸ್ಟ್‌ ಏರಿದ ಮೂರನೇ ವ್ಯಕ್ತಿಯಾಗಿದ್ದರು. ಅದಕ್ಕಿಂತ ಮುಂಚೆ ಅಪಾ ಶೆರ್ಪಾ ಹಾಗೂ ಫುರ್ಬಾ ತಾಸಿ ಈ ಸಾಧನೆ ಮಾಡಿದ್ದರು. ಇಬ್ಬರೂ ಈಗ ನಿವೃತ್ತರಾಗಿದ್ದಾರೆ.