2022ಕ್ಕೆ ಇಂಟರ್ಪೋಲ್ ಸಮಾನ್ಯ ಸಭೆಯ ಆತಿಥ್ಯ ಭಾರತದ ಪಾಲಿಗೆ: ಗೃಹ ಸಚಿವಾಲಯ ಮಾಹಿತಿ

0
22

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಭಾಗವಾಗಿ 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಟರ್ಪೋಲ್​ ಸಾಮಾನ್ಯ ಸಭೆಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ದೊರಕಿದೆ.

ನವದೆಹಲಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಯ ಭಾಗವಾಗಿ 2022ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಟರ್ಪೋಲ್​ ಸಾಮಾನ್ಯ ಸಭೆಗೆ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ದೊರಕಿದೆ.

ಕಳೆದ ಆಗಸ್ಟ್​ 30ರಂದು ಗೃಹ ಸಚಿವ ಅಮಿತ್​ ಷಾ ಅವರು ಇಂಟರ್ಪೋಲ್​ ಸಾಮಾನ್ಯ ಸಭೆಯ ಆತಿಥ್ಯ ವಹಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಇಂಟರ್ಪೋಲ್ ಪ್ರಧಾನ ಕಾರ್ಯದರ್ಶಿ ಜರ್ಗನ್​ ಸ್ಟಾಕ್​ ಅವರು ಅಮಿತ್​ ಷಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದಾಗ ಈ ಪ್ರಸ್ತಾವನೆಯನ್ನು ಅವರ ಮುಂದಿಡಲಾಗಿತ್ತು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಹೀಗಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ 91ನೇ ಇಂಟರ್ಪೋಲ್​ ಸಾಮಾನ್ಯ ಸಭೆಯ ಆತಿಥ್ಯ ವಹಿಸಲು ಭಾರತಕ್ಕೆ ಅವಕಾಶ ಸಿಕ್ಕಿದೆ. 2022ರಲ್ಲಿ ದೆಹಲಿಯಲ್ಲಿ ಸಭೆ ನಡೆಯಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸದ್ಯ ಚಿಲಿ ರಾಷ್ಟ್ರದ ಸ್ಯಾಂಟಿಯಾಗೋ ನಗರದಲ್ಲಿ ನಡೆಯುತ್ತಿರುವ 88ನೇ ಇಂಟರ್ಪೋಲ್​ ಸಾಮಾನ್ಯ ಸಭೆಯಲ್ಲಿ ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲ ಪಾಲ್ಗೊಂಡಿದ್ದಾರೆ. ಅಕ್ಟೋಬರ್ 18 ರ ಶುಕ್ರವಾರ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಭಾರತದ ಆತಿಥ್ಯಕ್ಕೆ ಅವಕಾಶ ನೀಡುವ ಪ್ರಸ್ತಾವನೆಯನ್ನು ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ನೆರೆದಿದ್ದ ಅನೇಕರು ಭಾರತದ ಪರವಾಗಿ ವೋಟ್​ ಮಾಡಿದ್ದರಿಂದ ಭಾರತಕ್ಕೆ 91ನೇ ಇಂಟರ್ಪೋಲ್​ ಸಾಮಾನ್ಯ ಸಭೆಯ ಆತಿಥ್ಯ ದೊರಕಿತು.​

ಅಂತಾರಾಷ್ಟ್ರೀಯ ಇಂಟರ್ಪೋಲ್​ ಸಂಸ್ಥೆಯು 194 ಸದಸ್ಯ ರಾಷ್ಟ್ರಗಳನ್ನು ಹೊಂದಿದ್ದು, ಪೊಲೀಸ್​ ಸಹಕಾರದಲ್ಲಿ 100 ವರ್ಷದ ಅನುಭವವನ್ನು ಹೊಂದಿದೆ. ಇಂಟರ್ಪೋಲ್​ 17 ಡಾಟಾಬೇಸ್​ನ 90 ಮಿಲಿಯನ್​ ಹೌಸ್​ಗಳನ್ನು ಹೊಂದಿದೆ. (ಏಜೆನ್ಸೀಸ್​)