2020ರ ಏಪ್ರಿಲ್​ನಿಂದ ಬಿಎಸ್-6 ವಾಹನ ಮಾರಾಟ ಕಡ್ಡಾಯ: ಸುಪ್ರೀಂಕೋರ್ಟ್

0
608

ರಾಷ್ಟ್ರದಲ್ಲಿ ಭಾರತ್ ಸ್ಟೇಜ್ 6 (ಬಿಎಸ್-6) ವಾಹನಗಳ ಮಾರಾಟವನ್ನು 2020ರ ಏಪ್ರಿಲ್ 1 ರಿಂದ ಕಡ್ಡಾಯಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.

ಜಸ್ಟೀಸ್​ ಮದನ್​ ಬಿ. ಲೋಕೂರ್​ ಅವರ ನೇತೃತ್ವದ ತ್ರಿಸದಸ್ಯ ಪೀಠ ಬಿಎಸ್​-4 ವಾಹನಗಳ ಮಾರಾಟಕ್ಕೆ 2020ರ ಮಾರ್ಚ್​ 31ರ ನಂತರ ಹೆಚ್ಚುವರಿ ಸಮಯಾವಕಾಶ ನೀಡಿ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ನ್ಯಾಯ ಪೀಠ ಸ್ವಚ್ಛ ಇಂಧನದ ವಾಹನಗಳ ಮಾರಾಟದತ್ತ ಸಾಗಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದು, ಬಿಎಸ್​-4 ವಾಹನಗಳ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಮೋಟಾರು ವಾಹನಗಳಿಂದಾಗುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರತ್ ಸ್ಟೇಜ್ ಹೊಗೆ ಉಗುಳುವಿಕೆ ಮಟ್ಟವನ್ನು ನಿಗದಿಪಡಿಸಿದೆ. ಸದ್ಯ ಬಿಎಸ್-4 ನೀತಿ ಜಾರಿಯಲ್ಲಿದೆ. ಬಿಎಸ್-5 ಬದಲು ನೇರವಾಗಿ ಬಿಎಸ್-6 ಗುಣಮಟ್ಟದ ಇಂಧನ ಮಾರಾಟ ವ್ಯವಸ್ಥೆ 2020ರ ವೇಳೆಗೆ ಪರಿಚಯಿಸುವ ಕುರಿತು ಕೇಂದ್ರ ಸರ್ಕಾರ 2016ರಲ್ಲಿ ನಿರ್ಧಾರ ಕೈಗೊಂಡಿತ್ತು.