2020ಕ್ಕೆ ಮಂಗಳಗ್ರಹಕ್ಕೆ ಹೆಲಿಕಾಪ್ಟರ್‌: ನಾಸಾ ಯೋಜನೆ

0
20

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’, 2020ರಲ್ಲಿ ಮಂಗಳಗ್ರಹಕ್ಕೆ ಮೊದಲ ಹೆಲಿಕಾಪ್ಟರ್‌ ಕಳುಹಿಸುವ ಯೋಜನೆ ರೂಪಿಸಿದೆ.

ಥಂಪಾ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’, 2020ರಲ್ಲಿ ಮಂಗಳಗ್ರಹಕ್ಕೆ ಮೊದಲ ಹೆಲಿಕಾಪ್ಟರ್‌ ಕಳುಹಿಸುವ ಯೋಜನೆ ರೂಪಿಸಿದೆ.

ಈ ಹೆಲಿಕಾಪ್ಟರ್‌ ಮಾನವರಹಿತವಾಗಿದ್ದು, ಡ್ರೋಣ್‌ ಮಾದರಿಯಲ್ಲಿದೆ. ಮಂಗಳ ಗ್ರಹದ ಕುರಿತ ಮಾಹಿತಿಯನ್ನು ಮತ್ತಷ್ಟು ತಿಳಿದುಕೊಳ್ಳಲು ‘ನಾಸಾ’ ಈ ಯೋಜನೆ ಕೈಗೊಂಡಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಇದಕ್ಕೆ ‘ದಿ ಮಾರ್ಸ್ ಹೆಲಿಕಾಪ್ಟರ್’ ಎಂದು ಹೆಸರಿಡಲಾಗಿದ್ದು, 1.8 ಕಿಲೋ ಗ್ರಾಂ ತೂಕ ಇದೆ. ಇದರ ಮುಖ್ಯ ಭಾಗವು ಒಂದು ಚೆಂಡಿನ ಗಾತ್ರದಲ್ಲಿ ಇರಲಿದೆ.

‘2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ಕಳುಹಿಸಲಿರುವ ಗಗನನೌಕೆ ಜೊತೆಗೆ ಈ ಹೆಲಿಕಾಪ್ಟರ್‌ ಅನ್ನು ಕಳುಹಿಸಲಾಗುವುದು. ಅದು 2021ರ ಫೆಬ್ರುವರಿಯಲ್ಲಿ ಇಳಿಯಲಿದೆ.

ಇನ್ನೊಂದು ಗ್ರಹದಲ್ಲಿ ಹೆಲಿಕಾಪ್ಟರ್‌ ಹಾರಾಟ ನಡೆಸುವ ಯೋಚನೆಯೇ ರೋಮಾಂಚನಕಾರಿಯಾದುದು. ಹಲವು ಪ್ರಥಮಗಳನ್ನು ಸಾಧಿಸಿದ ಹೆಮ್ಮೆ ‘ನಾಸಾ’ದ್ದಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಜಿಮ್ ಬ್ರೈಡನ್‌ಸ್ಟೈನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.