2019 ರ ವಿಂಬಲ್ಡನ್ ಟೆನಿಸ್ ಟೂರ್ನಿ: ನೊವಾಕ್ ಜೋಕೊವಿಕ್ ಗೆ ಪ್ರಶಸ್ತಿ

0
28

ವಿಂಬಲ್ಡನ್ ಇತಿಹಾಸದಲ್ಲಿ 71 ವರ್ಷಗಳ ಬಳಿಕ ಚಾಂಪಿಯನ್​ಷಿಪ್ ಪಾಯಿಂಟ್ ರಕ್ಷಣೆ ಮಾಡಿಕೊಂಡು ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ವಿಶ್ವ ನಂ.1 ನೊವಾಕ್ ಜೋಕೊವಿಕ್ ಪಾತ್ರರಾದರು.

ಲಂಡನ್: ವಿಂಬಲ್ಡನ್ ಇತಿಹಾಸದಲ್ಲಿ 71 ವರ್ಷಗಳ ಬಳಿಕ ಚಾಂಪಿಯನ್​ಷಿಪ್ ಪಾಯಿಂಟ್ ರಕ್ಷಣೆ ಮಾಡಿಕೊಂಡು ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ವಿಶ್ವ ನಂ.1 ನೊವಾಕ್ ಜೋಕೊವಿಕ್ ಪಾತ್ರರಾದರು. ವಿಂಬಲ್ಡನ್ ಪ್ರಶಸ್ತಿ ಸುತ್ತಿನ 2ನೇ ಸುದೀರ್ಘ (5 ಗಂಟೆ) ಹೋರಾಟದಲ್ಲಿ ಸೆರ್ಬಿಯಾದ ಜೋಕೊವಿಕ್ 7-6, 1-6, 7-6, 4-6, 12-12 (7/3) ಸೆಟ್​ಗಳಿಂದ 8 ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಅವರನ್ನು ಮಣಿಸಿದರು. ಇದರೊಂದಿಗೆ ಆಲ್ ಇಂಗ್ಲೆಂಡ್ ಕ್ಲಬ್​ನಲ್ಲಿ ಸತತ 2ನೇ ಹಾಗೂ 5ನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದರು.

2003ರಿಂದ ಎರಡು ಆವೃತ್ತಿ ಹೊರತುಪಡಿಸಿ ಆಲ್ ಇಂಗ್ಲೆಂಡ್ ಕ್ಲಬ್​ನಲ್ಲಿ ಕನಿಷ್ಠ ಇಬ್ಬರಲ್ಲಿ ಇಬ್ಬರು ಫೈನಲ್ ಪಂದ್ಯವಾಡುತ್ತಿರುವ ಸಂಪ್ರದಾಯ ಉಳಿಸಿಕೊಂಡಿರುವ ಜೋಕೋ-ಫೆಡರರ್ ಮತ್ತೊಂದು ರೋಚಕ ಕಾಳಗಕ್ಕೆ ಸಾಕ್ಷಿಯಾದರು. ಹುಲ್ಲಿನ ಅಂಕಣದ ಹೋರಾಟದಲ್ಲಿ ಸಾಕಷ್ಟು ಪಕ್ವತೆ ಹೊಂದಿರುವ ಫೆಡರರ್ ಆರಂಭಿಕ ಹಂತದಲ್ಲೇ ಆಕ್ರಮಣಕಾರಿ ಹೋರಾಟದ ಮೂಲಕ ಗಮನಸೆಳೆದರು. ಬ್ಯಾಕ್​ಹ್ಯಾಂಡ್ ಮೂಲಕವೇ ಹೆಚ್ಚಾಗಿ ಚೆಂಡನ್ನು ವಾಪಸ್ ಕಳುಹಿಸುತ್ತಿದ್ದ ಫೆಡೆರರ್ 5-3ರಿಂದ ಮುನ್ನಡೆ ಸಾಧಿಸಿ ಮೊದಲ ಸೆಟ್ ಗೆಲುವಿನ ಸನಿಹಕ್ಕೇರಿದರು. ಆದರೆ, ವಿಶ್ವ ನಂ.1 ಆಟಗಾರ ಜೋಕೋ ತಮ್ಮ 2ನೇ ಸರ್ವ್​ನಲ್ಲಿ ತಿರುಗೇಟು ನೀಡಿದರು. ಕಡೇ 10 ಅಂಕಗಳ ಪೈಕಿ 7 ಅಂಕ ಕಲೆಹಾಕುವ ಮೂಲಕ 6-6ರಿಂದ ಸಮಬಲ ಸಾಧಿಸಿದರು. ಬಳಿಕ ಟೈಬ್ರೇಕರ್​ನಲ್ಲಿ ಫೆಡರರ್ 7-5ರಿಂದ ಹಿಂದಿಕ್ಕಿ ಗೆಲುವಿನ ನಗೆ ಬೀರಿದರು.

59 ನಿಮಿಷಗಳ ಕಾಲ ನಡೆದ ಮೊದಲ ಸೆಟ್​ನಲ್ಲಿ ಜಯಿಸಿದ ಜೋಕೋ ಪಂದ್ಯದಲ್ಲಿ 1-0ಯಿಂದ ಮುನ್ನಡೆ ಸಾಧಿಸಿದರು. ಎರಡನೇ ಗೇಮ್ಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಫೆಡರರ್ ಮೊದಲ ಸರ್ವೀಸ್​ನಲ್ಲೇ 9ಕ್ಕೆ 9 ಅಂಕ ಗಳಿಸಿಸುವುದರೊಂದಿಗೆ 6-1 ರಿಂದ ಜಯ ದಾಖಲಿಸಿ ಪಂದ್ಯದಲ್ಲಿ 1-1ರಿಂದ ಸಮಬಲ ಸಾಧಿಸಿದರು. ಕೇವಲ 15 ನಿಮಿಷಗಳ ಅಂತರದಲ್ಲಿ ಫೆಡರರ್ 2ನೇ ಸೆಟ್ ಗೆದ್ದರು. ಮೊದಲ ಸೆಟ್ ಮಾದರಿಯಲ್ಲೇ ನಡೆದ 3ನೇ ಸೆಟ್ ಹೋರಾಟದಲ್ಲೂ ದಿಗ್ಗಜ ಆಟಗಾರರು ಏಟಿಗೆ ಏದಿರೇಟು ಹೋರಾಟ ನೀಡುವಲ್ಲಿ ಯಶಸ್ವಿಯಾದರು. 5-4 ರಿಂದ ಮುನ್ನಡೆ ಸಾಧಿಸಿ ಗೆಲುವಿನ ಹಾದಿಯಲ್ಲಿದ್ದ ಫೆಡರರ್ ಓಟಕ್ಕೆ ಜೋಕೋ ಬ್ರೇಕ್ ಹಾಕಿದರು. ಟೈ ಬ್ರೇಕರ್ ಹೋರಾಟದಲ್ಲಿ ಆರಂಭದಲ್ಲೇ 3-0 ಮುನ್ನಡೆ ಸಾಧಿಸಿದ ಜೋಕೋ ಗೆಲುವು ಖಚಿತಪಡಿಸಿಕೊಂಡರು. ಈ ಹಂತದಲ್ಲಿ ಫೆಡರರ್ ಹೆಚ್ಚು ಅನಿರ್ಬಂಧಿತ ತಪು್ಪಗಳನ್ನು ಎಸೆಗಿದ್ದು ದುಬಾರಿಯಾಯಿತು.

ಫೆಡರರ್ ಪಾಲಿನ ನಿರ್ಣಾಯಕ 4ನೇ ಸೆಟ್​ನಲ್ಲಿ ಬ್ಯಾಕ್​ಹ್ಯಾಂಡ್ ಶಾಟ್​ಗಳಿಂದ ಜೋಕೋಗೆ ಒತ್ತಡ ಹೇರಲು ಯಶಸ್ವಿಯಾದರು. ಮತ್ತೊಮ್ಮೆ ಫೆಡರರ್ 5-4ರಿಂದ ಮುನ್ನಡೆ ಸಾಧಿಸಿದ್ದ ವೇಳೆ ಸೆರ್ಬಿಯಾ ಆಟಗಾರನ ಮೇಲೆ ಪ್ರಭುತ್ವ ಸಾಧಿಸಿ ಫೆಡರರ್ ಸೆಟ್ ವಶಪಡಿಸಿಕೊಂಡರು. ಇದರೊಂದಿಗೆ ಪಂದ್ಯ 2-2 ರಿಂದ ಸಮಬಲ ಕಂಡಿತು. ಅಂತಿಮ ಸೆಟ್​ನಲ್ಲಿ ಉಭಯ ಆಟಗಾರರ 12-12 ರಿಂದ ಸಮಬಲ ಸಾಧಿಸಿದರು. ಬಳಿಕ 3ನೇ ಯತ್ನದಲ್ಲೂ ಟೈಬ್ರೇಕರ್​ನಲ್ಲಿ ಮೇಲುಗೈ ಸಾಧಿಸಿದ ಜೋಕೋ ಗೆಲುವಿನ ನಗೆ ಬೀರಿದರು.

ಜೋಕೊವಿಕ್ 16 ಗ್ರಾಂಡ್ ಸ್ಲಾಂ

# ಆಸ್ಟ್ರೇಲಿಯನ್ ಓಪನ್: 7(2008, 2011, 2012, 2013, 2015, 2016, 2019)

# ಫ್ರೆಂಚ್ ಓಪನ್: 1 (2016)

# ವಿಂಬಲ್ಡನ್: 5 (2011, 2014, 2015, 2018, 2019)

# ಯುಎಸ್ ಓಪನ್: 3 (2011, 2015, 2018)

05 ಫೆಡರರ್ ಎದುರು ಜೋಕೊವಿಕ್ ಸತತ 5ನೇ ಜಯ ದಾಖಲಿಸಿದರು. ಕಡೇ 11 ಪಂದ್ಯಗಳಲ್ಲಿ 9ನೇ ಜಯ ಇದಾಗಿದೆ.

04 ಜೋಕೊವಿಕ್ 30 ವರ್ಷ ದಾಟಿದ 4ನೇ ಗ್ರಾಂಡ್ ಸ್ಲಾಂ ಗೆದ್ದ 4ನೇ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಫೆಡರರ್, ರಾಫೆಲ್ ನಡಾಲ್​ಹಾಗೂ ರಾಡ್ ಲೆವೆರ್ ಈ ಸಾಧನೆ ಮಾಡಿದ್ದಾರೆ.