2019 ರ ವಿಂಬಲ್ಡನ್ ಟೆನಿಸ್ ಟೂರ್ನಿ: ಮಿಶ್ರ ಡಬಲ್ಸ್‌ನಲ್ಲಿ ಇವಾನ್ ಡಾಡಿಗ್ – ಲಟಿಷಾ ಚಾನ್ ಗೆ ಪ್ರಶಸ್ತಿ

0
16

ಕ್ರೊವೇಷ್ಯಾದ ಇವಾನ್ ಡಾಡಿಗ್ ಮತ್ತು ತೈವಾನ್‌ನ ಲಟಿಷಾ ಚಾನ್ ಜೋಡಿ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದರು. ಈ ಮೂಲಕ ಸತತ ಎರಡು ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದರು.

ಲಂಡನ್‌ (ಎಎಫ್‌ಪಿ): ಕ್ರೊವೇಷ್ಯಾದ ಇವಾನ್ ಡಾಡಿಗ್ ಮತ್ತು ತೈವಾನ್‌ನ ಲಟಿಷಾ ಚಾನ್  ಜೋಡಿ ವಿಂಬಲ್ಡನ್‌ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದರು. ಈ ಮೂಲಕ ಸತತ ಎರಡು ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದರು.

ಭಾನುವಾರ ನಡೆದ ಪಂದ್ಯದಲ್ಲಿ ಸ್ವೀಡನ್‌ನ ರಾಬರ್ಟ್‌ ಲಿಂಡ್‌ಸ್ಟೆಡ್ ಮತ್ತು ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ಜೋಡಿಯನ್ನು ಅವರು 6–2, 6–3ರಲ್ಲಿ ಮಣಿಸಿದರು.

ಚಾನ್ ಮತ್ತು ಡಾಡಿಗ್ ಜೋಡಿ ಫ್ರೆಂಚ್ ಓಪನ್ ಟೂರ್ನಿಯಲ್ಲೂ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಹೀಗಾಗಿ ಮಿಶ್ರ ಡಬಲ್ಸ್‌ನಲ್ಲಿ ಬಲಿಷ್ಠ ಜೋಡಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಚಾನ್‌ 2017ರ ಅಮೆರಿಕ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ಪ್ರಶಸ್ತಿ ಗಳಿಸಿದ್ದರು. 

ಎಂಟನೇ ಶ್ರೇಯಾಂಕಿತ ಈ ಜೋಡಿ ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಹೀಗಾಗಿ ಮೊದಲ ಸೆಟ್‌ನ ಮೊದಲ ಐದು ಗೇಮ್‌ಗಳನ್ನು ಗೆದ್ದುಕೊಂಡು ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು.

ಎರಡನೇ ಸೆಟ್‌ನಲ್ಲೂ ಆರಂಭದಲ್ಲಿ ಇದೇ ಜೋಡಿ ಪಾರಮ್ಯ ಮೆರೆದಿತ್ತು. ಆದರೆ ಎಂಟನೇ ಗೇಮ್‌ನಲ್ಲಿ ಎದುರಾಳಿಗಳು ತಿರುಗೇಟು ನೀಡಿದರು. ಆದರೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಸೆಟ್ ಸೋತು ಪ್ರಶಸ್ತಿಯನ್ನು ಕೈಚೆಲ್ಲಿದರು.