2019 ರ ಲೋಕಸಭೆ ಚುನಾವಣೆ : ಕರ್ನಾಟಕದಲ್ಲಿ ಏಪ್ರಿಲ್ 18, 23ರಂದು ಮತದಾನ

0
812

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 18 ಮತ್ತು ಏಪ್ರಿಲ್‌ 23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಹಾಗೂ ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಹೊಸದಿಲ್ಲಿ: ಲೋಕಸಭೆ ಚುನಾವಣೆ 2019ರ ಮಹಾಸಮರಕ್ಕೆ ಚುನಾವಣೆ ಆಯೋಗ ಮುಹೂರ್ತ ನಿಗದಿ ಮಾಡಿದ್ದು, 7 ಹಂತಗಳಲ್ಲಿ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ. ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ದಿಲ್ಲಿಯ ವಿಜ್ಞಾನ ಭವನದಲ್ಲಿ ಇಂದು ಸಂಜೆ ಪತ್ರಿಕಾಗೋಷ್ಠಿಯಲ್ಲಿ ಈ ವೇಳಾಪಟ್ಟಿ ಪ್ರಕಟಿಸಿದರು. 

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 18 ಮತ್ತು ಏಪ್ರಿಲ್‌ 23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 14 ಹಾಗೂ ಎರಡನೇ ಹಂತದಲ್ಲಿ ಉಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 

ಏಪ್ರಿಲ್‌ 18 ರಂದು ನಡೆಯುವ ಲೋಕಸಭಾ ಕ್ಷೇತ್ರಗಳು

1ಉಡುಪಿ-ಚಿಕ್ಕಮಗಳೂರು
2. ಹಾಸನ
3. ದಕ್ಷಿಣ ಕನ್ನಡ
4. ಚಿತ್ರದುರ್ಗ
5. ಮಂಡ್ಯ
6. ತುಮಕೂರು
7. ಮೈಸೂರು
8 . ಚಾಮರಾಜನಗರ
9. ಬೆಂಗಳೂರು ಗ್ರಾಮಾಂತರ
10. ಬೆಂಗಳೂರು ಉತ್ತರ
11. ಬೆಂಗಳೂರು ಕೇಂದ್ರ
12.ಬೆಂಗಳೂರು ದಕ್ಷಿಣ
13. ಚಿಕ್ಕಬಳ್ಳಾಪುರ
14. ಕೋಲಾರ

ಏಪ್ರೀಲ್ 23 ರಂದು ರಂದು ನಡೆಯುವ ಲೋಕಸಭಾ ಕ್ಷೇತ್ರಗಳು

1. ಚಿಕ್ಕೋಡಿ

2. ಬೆಳಗಾವಿ

3. ಬಾಗಲಕೋಟೆ

4. ವಿಜಯಪುರ

5. ಕಲಬುರಗಿ

6. ರಾಯಚೂರು

7. ಬೀದರ್

8. ಕೊಪ್ಪಳ

9. ಬಳ್ಳಾರಿ

10.ಹಾವೇರಿ

11.ಧಾರವಾಡ

12. ಉತ್ತರ ಕನ್ನಡ

13. ದಾವಣಗೆರೆ

14. ಶಿವಮೊಗ್ಗ

ಏಪ್ರಿಲ್ 11ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ, ಎರಡನೇ ಹಂತದ ಚುನಾವಣೆ ಏಪ್ರಿಲ್‌ 18ರಂದು ನಡೆಯಲಿದೆ. 3ನೇ ಹಂತದ ಚುನಾವಣೆ ಏಪ್ರಿಲ್ 23ರಂದು ನಡೆಯಲಿದೆ. 4ನೇ ಹಂತ 29 ಏಪ್ರಿಲ್, 5ನೇ ಹಂತ ಮೇ6ರಂದು, ಮೇ 12ಕ್ಕೆ 6ನೇ ಹಂತ, 7ನೇ ಹಂತದ ಚುನಾವಣೆ ಮೇ 19ರಂದು ನಡೆಯಲಿದೆ.

ಮೇ 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ