2019 ರ ಬ್ರಿಟನ್‌ ಸಿರಿವಂತರ ವಾರ್ಷಿಕ ಪಟ್ಟಿ(ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌) ಬಿಡುಗಡೆ : ಹಿಂದೂಜಾ ಸಹೋದರರಿಗೆ ಅಗ್ರ ಸ್ಥಾನ

0
21

2019 ರ ಬ್ರಿಟನ್‌ ಸಿರಿವಂತರ ವಾರ್ಷಿಕ ಪಟ್ಟಿ(ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌) ಬಿಡುಗಡೆಯಾಗಿದ್ದು, ಭಾರತೀಯ ಮೂಲದ ಸಹೋದರರು ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಹಿಂದೂಜಾ ಸಹೋದರರು(ಶ್ರೀಚಂದ್‌ ಮತ್ತು ಗೋಪಿಚಂದ್‌ ಹಿಂದೂಜಾ) ನಂ.1 ಸ್ಥಾನ ಕಾಯ್ದುಗೊಂಡಿದ್ದು, 22 ಬಿಲಿಯನ್‌ ಪೌಂಡ್‌(ಸುಮಾರು 1.99 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ.

ಲಂಡನ್‌: 2019 ರ ಬ್ರಿಟನ್‌ ಸಿರಿವಂತರ ವಾರ್ಷಿಕ ಪಟ್ಟಿ(ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌) ಬಿಡುಗಡೆಯಾಗಿದ್ದು, ಭಾರತೀಯ ಮೂಲದ ಸಹೋದರರು ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಹಿಂದೂಜಾ ಸಹೋದರರು(ಶ್ರೀಚಂದ್‌ ಮತ್ತು ಗೋಪಿಚಂದ್‌ ಹಿಂದೂಜಾ) ನಂ.1 ಸ್ಥಾನ ಕಾಯ್ದುಗೊಂಡಿದ್ದು, 22 ಬಿಲಿಯನ್‌ ಪೌಂಡ್‌(ಸುಮಾರು 1.99 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ. 

ಮುಂಬಯಿ ಮೂಲದ ರೂಬೆನ್‌ ಸಹೋದರರು 18.66 ಬಿಲಿಯನ್‌ ಪೌಂಡ್‌(ಸುಮಾರು 1.66 ಲಕ್ಷ ಕೋಟಿ ರೂ.) ಸಂಪತ್ತು ಹೊಂದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ, ಭಾರತೀಯ ಮೂಲದ ಲಕ್ಷ್ಮಿ ಮಿತ್ತಲ್‌ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. 2008ರಲ್ಲಿ ಮಿತ್ತಲ್‌ ಅವರು ಬ್ರಿಟನ್‌ನ ಸಿರಿವಂತ ವ್ಯಕ್ತಿಯಾಗಿದ್ದರು. ಬ್ರಿಟನ್‌ನಲ್ಲಿ ಹಿಂದೂಜಾ ಗ್ರೂಪ್‌ ಆಫ್‌ ಕಂಪನೀಸ್‌ ಅನ್ನು ಶ್ರೀಚಂದ್‌ ಮತ್ತು ಗೋಪಿಚಂದ್‌ ಹಿಂದೂಜಾ ನಿರ್ವಹಿಸುತ್ತಿದ್ದಾರೆ. ಈ ಸಹೋದರರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ 1.35 ಬಿಲಿಯನ್‌ ಪೌಂಡ್ಸ್‌ ಹೆಚ್ಚಾಗಿದೆ. 

ಶ್ರೀಚಂದ್‌(81) ಮತ್ತು ಗೋಪಿಚಂದ್‌ ಹಿಂದೂಜಾ(77) ಸೋದರರು ತೈಲ ಮತ್ತು ಅನಿಲ, ಆಟೊಮೊಬೈಲ್‌, ಐಟಿ, ಇಂಧನ, ಮಾಧ್ಯಮ, ಬ್ಯಾಂಕಿಂಗ್‌, ಪ್ರಾಪರ್ಟಿ, ಆರೋಗ್ಯ ವಲಯಗಳಲ್ಲಿ ಉದ್ದಿಮೆಗಳನ್ನು ನಡೆಸುತ್ತಿದ್ದಾರೆ. 2017ರಲ್ಲಿ ಲಂಡನ್‌ನ ಐತಿಹಾಸಿಕ ಹಾಗೂ ರಕ್ಷ ಣಾ ಉದ್ದೇಶಗಳಿಗೆ ಈ ಹಿಂದೆ ಬಳಕೆಯಾಗುತ್ತಿದ್ದ ಹಳೆಯ ಓಲ್ಡ್‌ ವಾರ್‌ ಆಫೀಸ್‌ ಕಟ್ಟಡವನ್ನು ಖರೀದಿಸಿ ಅದನ್ನು ಪಂಚತಾರಾ ಹೋಟೆಲ್‌ ಆಗಿ ಪರಿವರ್ತಿಸಿದ್ದರು.