2019 ರ ಏಷ್ಯನ್ ಯುವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್ : ಭಾರತಕ್ಕೆ 5 ಪದಕ

0
464

ಎರಡು ಸ್ವರ್ಣ ಸೇರಿದಂತೆ ಭಾರತ ಮಾರ್ಚ್ 15 ರ ಶುಕ್ರವಾರ ಆರಂಭಗೊಂಡ ಏಷ್ಯನ್ ಯುವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಐದು ಪದಕ ಗೆದ್ದುಕೊಂಡಿತು.

ಹಾಂಕಾಂಗ್: ಎರಡು ಸ್ವರ್ಣ ಸೇರಿದಂತೆ ಭಾರತ ಮಾರ್ಚ್ 15 ರ ಶುಕ್ರವಾರ ಆರಂಭಗೊಂಡ ಏಷ್ಯನ್ ಯುವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಐದು ಪದಕ ಗೆದ್ದುಕೊಂಡಿತು.

ಬಾಲಕರ 110 ಮೀಟರ್ಸ್ ಹರ್ಡಲ್ಸ್ ವಿಭಾಗದಲ್ಲಿ ಫಿಲಿಪ್ ಮಹೇಶ್ವರನ್ ತಬಿತಾ, 12.86 ಸೆಕೆಂಡ್​ಗಳಲ್ಲಿ ಈ ಗುರಿ ಕ್ರಮಿಸುವ ಮೂಲಕ ಭಾರತಕ್ಕೆ ಮೊದಲ ಸ್ವರ್ಣ ಗೆದ್ದುಕೊಟ್ಟರು. ಬಾಲಕರ ಹ್ಯಾಮರ್ ಥ್ರೋನಲ್ಲಿ ವಿಪಿನ್ ಕುಮಾರ್ 69.63 ಮೀಟರ್ ಎಸೆಯುವ ಮೂಲಕ ಸ್ವರ್ಣ ತಂದುಕೊಟ್ಟರು. ಬಾಲಕಿಯರ ಹ್ಯಾಮರ್ ಥ್ರೋನಲ್ಲಿ ಹರ್ಷಿತಾ, 61.93 ಮೀಟರ್ ಎಸೆದು ಬೆಳ್ಳಿ ಗೆದ್ದರು. ಬಾಲಕರ ಪೋಲ್​ವಾಲ್ಟ್​ನಲ್ಲಿ ದೀಪಕ್ ಯಾದವ್ (4.70ಮೀ) ಹಾಗೂ ಅಜಯ್ 1500 ಮೀಟರ್ ರೇಸ್​ಲ್ಲಿ 57.25 ಸೆಕೆಂಡ್​ಗಳಲ್ಲಿ ಕ್ರಮಿಸುವ ಮೂಲಕ ಕಂಚಿನ ಪದಕ ಗೆದ್ದರು