2019 ರ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿ :”ಕರೋಲಿನಾ ಪ್ಲಿಸ್ಕೋವಾ”ಗೆ ಸಿಂಗಲ್ಸ್ ಕಿರೀಟ

0
27

ಜೆಕ್ ಗಣರಾಜ್ಯದ ಆಟಗಾರ್ತಿ “ಕರೋಲಿನಾ ಪ್ಲಿಸ್ಕೋವಾ” ಅವರು ಮೇ 19 ರ ಭಾನುವಾರ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ರೋಮ್‌ (ರಾಯಿಟರ್ಸ್‌): ಜೆಕ್ ಗಣರಾಜ್ಯದ ಆಟಗಾರ್ತಿ “ಕರೋಲಿನಾ ಪ್ಲಿಸ್ಕೋವಾ” ಅವರು ಮೇ 19 ರ ಭಾನುವಾರ ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಬ್ರಿಟನ್ ಆಟಗಾರ್ತಿ ಜೋಹಾನ್ನಾ ಕೊಂಥಾ ಅವರನ್ನು 6–3, 6–4 ಸೆಟ್‌ಗಳಿಂದ ಮಣಿಸಿದ ಅವರು ಟ್ರೋಫಿಗೆ ಮುತ್ತಿಕ್ಕಿದರು. ಕೊಂಥಾ ಅವರ ಕೆಂಪು ಮಣ್ಣಿನ ಅಂಕಣದಲ್ಲಿ ಮೊದಲ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಯಿತು.

ಒಂದೇ ಒಂದು ಗೇಮ್‌ ಬಿಟ್ಟುಕೊಡದ ಜೆಕ್‌ ಗಣರಾಜ್ಯದ ಆಟಗಾರ್ತಿ ಪ್ಲಿಸ್ಕೋವಾ,  ಒಂದು ತಾಸು 25 ನಿಮಿಷಗಳ ಪಂದ್ಯದಲ್ಲಿ ಪಾರಮ್ಯ ಮೆರೆದರು. 1978ರಲ್ಲಿ ರೆಜಿನಾ ಮರ್ಸಿಕೊವಾ ಬಳಿಕ ರೋಮ್‌ ಟೂರ್ನಿ ಜಯಿಸಿದ ಮೊದಲ ಜೆಕ್‌ ಆಟಗಾರ್ತಿ ಎನಿಸಿಕೊಂಡರು.

ಫೈನಲ್‌ಗೆ ತಲುಪುವ ಹಾದಿಯಲ್ಲಿ ಬ್ರಿಟಿಷ್‌ ಆಟಗಾರ್ತಿ ಕೊಂಟಾ ಅವರು ಘಟಾನುಘಟಿ ಆಟಗಾರ್ತಿಯರನ್ನು ಸೋಲಿಸಿದ್ದರು. ಸ್ಲೋವಾನೆ ಸ್ಟೀಫನ್ಸ್‌, ವೀನಸ್‌ ವಿಲಿಯಮ್ಸ್‌ ಹಾಗೂ ಮ್ಯಾಡ್ರಿಡ್‌ ಓಪನ್‌ ಚಾಂಪಿಯನ್‌ ಕಿಕಿ ಬೆರ್ಟೆನ್ಸ್‌ ಅವರು ಕೊಂಟಾಗೆ ಮಣಿದಿದ್ದರು.

ಫೈನಲ್‌ ಪಂದ್ಯದಲ್ಲಿ ಪ್ಲಿಸ್ಕೊವಾ ಎದುರು ಕೊಂಟಾ ಪರದಾಟ ನಡೆಸಿದರು. ಪ್ಲಿಸ್ಕೊವಾ ವಿರುದ್ಧ ಒಟ್ಟು 8 ಪಂದ್ಯಗಳನ್ನು ಆಡಿರುವ ಕೊಂಟಾ ಅವರು ಏಳು ಪಂದ್ಯಗಳಲ್ಲಿ ಸೋಲಿನ ರುಚಿ ಕಂಡಿದ್ದಾರೆ.

ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಸ್ಪೇನ್ ಆಟಗಾರ ರಾಫೆಲ್ ನಡಾಲ್ ಅವರು ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದಾರೆ

# ಇಟಾಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಸ್ಥಾಪನೆ : 1930