2019 ರ ಇಂಡೋನೇಷ್ಯಾ ಓಪನ್ ಸೂಪರ್​ 1000 ಬ್ಯಾಡ್ಮಿಂಟನ್​ ಟೂರ್ನಿ : ಪಿವಿ ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿ

0
46

ಇಂಡೋನೇಷ್ಯಾ ಓಪನ್​ ಸೂಪರ್​ 1000 ಬ್ಯಾಡ್ಮಿಂಟನ್​ ಟೂರ್ನಿಯ ಫೈನಲ್​ನಲ್ಲಿ ರಿಯೋ ಒಲಿಂಪಿಕ್​ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಜಪಾನ್​ನ ಅಕಾನೆ ಯಮಗುಚಿ ವಿರುದ್ಧ ಸೋಲನುಭವಿಸುವ ಮೂಲಕ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್​ ಆಗುವ ಅವಕಾಶದಿಂದ ವಂಚಿತರಾಗಿದ್ದಾರೆ.

ಜಕಾರ್ತ: ಇಂಡೋನೇಷ್ಯಾ ಓಪನ್​ ಸೂಪರ್​ 1000 ಬ್ಯಾಡ್ಮಿಂಟನ್​ ಟೂರ್ನಿಯ ಫೈನಲ್​ನಲ್ಲಿ ರಿಯೋ ಒಲಿಂಪಿಕ್​ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಜಪಾನ್​ನ ಅಕಾನೆ ಯಮಗುಚಿ ವಿರುದ್ಧ ಸೋಲನುಭವಿಸುವ ಮೂಲಕ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್​ ಆಗುವ ಅವಕಾಶದಿಂದ ವಂಚಿತರಾಗಿದ್ದಾರೆ.

ಜುಲೈ 21 ರ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ಸಿಂಧು 15-21, 16-21 ನೇರ ಗೇಮ್​ಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ಮೂಲಕ ಯಮಗುಚಿ ವಿರುದ್ಧ ಆಡಿದ 15 ಪಂದ್ಯಗಳಲ್ಲಿ ಐದನೇ ಬಾರಿಗೆ ಸೋಲನುಭವಿಸಿದರು.

ಪಿವಿ ಸಿಂಧು 2018ರ ಡಿಸೆಂಬರ್​ನಲ್ಲಿ ಬಿಡಬ್ಲ್ಯುಎಫ್​ ವರ್ಲ್ಡ್​ ಟೂನ್​ ಫೈನಲ್ಸ್​ನಲ್ಲಿ ಪ್ರಶಸ್ತಿ ಗಳಿಸಿದ್ದರು. ಆ ನಂತರ 7 ತಿಂಗಳಿಂದ ಪ್ರಶಸ್ತಿ ಬರ ಎದುರಿಸುತ್ತಿದ್ದ ಸಿಂಧು ಇಂದು ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದರು. ಆದರೆ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು.