2019 ರಲೋಕಸಭೆ ಚುನಾವಣೆ : ಮೈಸೂರು ಪೆಯಿಂಟ್ಸ್‌ನಿಂದ 26 ಲಕ್ಷ ಬಾಟಲಿ ಶಾಯಿ

0
389

ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವ ಸಲುವಾಗಿ 26 ಲಕ್ಷ ಬಾಟಲಿ (ಸಣ್ಣ ಸೀಸೆ) ಶಾಯಿ ಒದಗಿಸುವಂತೆ
ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ.

ನವದೆಹಲಿ (ಪಿಟಿಐ): ಏಪ್ರಿಲ್ 11ರಿಂದ ಆರಂಭವಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವ ಸಲುವಾಗಿ 26 ಲಕ್ಷ ಬಾಟಲಿ (ಸಣ್ಣ ಸೀಸೆ) ಶಾಯಿ ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗ ಆದೇಶಿಸಿದೆ. 

ಅಳಿಸಲಾಗದ ಶಾಯಿ ಉತ್ಪಾದಿಸುವ ದೇಶದ ಅಧಿಕೃತ ಸಂಸ್ಥೆ ಕರ್ನಾಟಕ ಸರ್ಕಾರದ ಒಡೆತನದ ‘ಮೈಸೂರ್ ಪೆಯಿಂಟ್ಸ್‌ ಅಂಡ್ ವಾರ್ನಿಷ್ ಲಿಮಿಟೆಡ್’ ಸಂಸ್ಥೆ ಮಾತ್ರ. 

‘ಶಾಯಿಗಳನ್ನು ಒದಗಿಸುವಂತೆ ಆಯೋಗ ಕೇಳಿದ್ದು, ಇದಕ್ಕೆ 33 ಕೋಟಿ ವೆಚ್ಚವಾಗಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ ತಿಳಿಸಿದ್ದಾರೆ. 

2014ರ ಚುನಾವಣೆಯಲ್ಲಿ 21.5 ಲಕ್ಷ ಬಾಟಲಿಗಳನ್ನು ಚುನಾವಣಾ ಆಯೋಗ ಬಳಸಿತ್ತು. ಈ ಬಾರಿ 4.5 ಲಕ್ಷ ಹೆಚ್ಚುವರಿ ಸೀಸೆ ಒದಗಿಸಲು ಸೂಚಿಸಲಾಗಿದೆ.