2019 ನೇ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪ್ರಕಟ

0
941

2019ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ‘ದಿ ಅಮೆರಿಕನ್ಸ್‌’ಗೆ ಅತ್ಯುತ್ತಮ ಟಿವಿ ಕಾರ್ಯಕ್ರಮ (ನಾಟಕ), ‘ದಿ ಕೊಮಿಂಸ್ಕಿ ಮೆಥಡ್‌’ ಅತ್ಯುತ್ತಮ ಟಿವಿ ಸರಣಿ ಕಾರ್ಯಕ್ರಮ್ (ಸಂಗೀತ/ಹಾಸ್ಯ) ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.

ಲಾಸ್‌ ಏಂಜಲೀಸ್‌ (ಪಿಟಿಐ): 2019ರ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ‘ದಿ ಅಮೆರಿಕನ್ಸ್‌’ಗೆ ಅತ್ಯುತ್ತಮ ಟಿವಿ ಕಾರ್ಯಕ್ರಮ (ನಾಟಕ), ‘ದಿ ಕೊಮಿಂಸ್ಕಿ ಮೆಥಡ್‌’  ಅತ್ಯುತ್ತಮ  ಟಿವಿ  ಸರಣಿ ಕಾರ್ಯಕ್ರಮ (ಸಂಗೀತ/ಹಾಸ್ಯ) ಎಂಬ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ.

ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕದಲ್ಲಿ ವಾಸಿಸುತ್ತಿದ್ದ ರಷ್ಯಾದ ಇಬ್ಬರು ಗೂಢಚಾರರ ಬಗೆಗಿನ ಕಥೆಯನ್ನು ‘ದಿ ಅಮೆರಿಕನ್ಸ್‌’ ಒಳಗೊಂಡಿದೆ.

‘ಬ್ಲ್ಯಾಕ್‌ ಪ್ಯಾಂಥರ್‌’ ಅತ್ಯುತ್ತಮ ಚಿತ್ರ, ‘ಎ ಸ್ಟಾರ್‌ ಇಸ್‌ ಬಾರ್ನ್‌’ ಚಿತ್ರದ ಬ್ರಾಡ್ಲೇ ಕೂಪರ್‌ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿದ್ದಾರೆ.

‘ವೈಸ್‌’ ಚಿತ್ರ 6 ವಿಭಾಗಗಳಲ್ಲಿ, ‘ಎ ಸ್ಟಾರ್‌ ಇಸ್‌ ಬಾರ್ನ್’ ಮತ್ತು ‘ದಿ ಫೇವರೇಟ್‌’ ಹಾಗೂ ‘ಗ್ರೀನ್‌ ಬುಕ್‌’ ಚಿತ್ರಗಳು ತಲಾ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡವು.