2019ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.1ಕ್ಕೆ ಕುಸಿಯಲಿದೆ: ಐಎಂಎಫ್

0
15

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಅಕ್ಟೋಬರ್ 15 ರ ಮಂಗಳವಾರ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಮತ್ತೆ ಪರಿಸ್ಕರಿಸಿದ್ದು, 2019ರಲ್ಲಿ ಜಿಡಿಪಿ ಶೇ.6.1ಕ್ಕೆ ಕುಸಿಯಲಿದೆ ಎಂದು ಹೇಳಿದೆ.

ವಾಷಿಂಗ್ಟನ್: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)  ಅಕ್ಟೋಬರ್ 15 ರ  ಮಂಗಳವಾರ ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣವನ್ನು ಮತ್ತೆ ಪರಿಸ್ಕರಿಸಿದ್ದು, 2019ರಲ್ಲಿ ಜಿಡಿಪಿ ಶೇ.6.1ಕ್ಕೆ ಕುಸಿಯಲಿದೆ ಎಂದು ಹೇಳಿದೆ.

ಕಳೆದ ಏಪ್ರಿಲ್ ನಲ್ಲಿ ಭಾರತ 2019ರಲ್ಲಿ ಶೇ.7.3ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಲಿದೆ ಎಂದು ಹೇಳಿತ್ತು. ಈಗ ಮೂರು ತಿಂಗಳ ನಂತರ ಭಾರತದ ಆರ್ಥಿಕ ಬೆಳವಣಿಗೆ ಶೇ. 6.1ಕ್ಕೆ ಕುಸಿಯಲಿದೆ ಎಂದು ಹೇಳಿದೆ.

2018ರಲ್ಲಿ ಭಾರತ ಶೇ. 6.8ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸಿತ್ತು. ಆದರ ಈ ವರ್ಷ ಶೇ. 6.1ರಷ್ಟು ಮಾತ್ರ ಅಭಿವೃದ್ಧಿ ಸಾಧಿಸಲಿದೆ ಎಂದು ವಿಶ್ವ ಹಣಕಾಸು ಸಂಸ್ಥೆ ಮುನ್ನೋಟ ತಿಳಿಸಿದೆ. ಅಲ್ಲದೆ ಭಾರತದ ಆರ್ಥಿಕ ಬೆಳವಣಿಗೆ 2020ರ ವೇಳೆಗೆ ಚೇತರಿಸಿಕೊಳ್ಳಲಿದ್ದು, ಶೇ.7.0ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಕಳೆದ ಭಾನುವಾರ ಬಿಡುಗಡೆಯಾದ ವಿಶ್ವ ಬ್ಯಾಂಕ್‍ನ ದಕ್ಷಿಣ ಏಷ್ಯಾದ ಆರ್ಥಿಕ ಮುನ್ನೋಟದಲ್ಲಿ, ಭಾರತದ ಆರ್ಥಿಕ ಬೆಳವಣಿಗೆ ಶೇ. 6ಕ್ಕೆ ಕುಸಿಯಲಿದೆ ಎಂದು ಹೇಳಿತ್ತು. ಕಳೆದ ಹಣಕಾಸು ವರ್ಷದಲ್ಲಿ(2018-19) ಇದೇ ಅವಧಿಯಲ್ಲಿ ಭಾರತದ ಬೆಳವಣಿಗೆ ದರ ಶೇ.6.9ರಷ್ಟಿತ್ತು.