2019ನೇ ಸಾಲಿನ ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್​ ಖಂದೇವಾಲ ಪ್ರಥಮ, ರಾಜ್ಯಕ್ಕೆ ಡಿ.ಕೆ.ಫಣೀಂದ್ರ ಫಸ್ಟ್‌

0
30

2019ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ಪದವಿ ಪೂರ್ವ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್​ ಖಂದೇವಾಲ ಅವರು ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ದೆಹಲಿಯ ಭವಿಕ್​ ಬನ್ಸಾಲ್​ ಮತ್ತು ಉತ್ತರ ಪ್ರದೇಶದ ಅಕ್ಷತ್​ ಕೌಶಿಕ್​ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ನವದೆಹಲಿ: 2019ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ಪದವಿ ಪೂರ್ವ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್​ ಖಂದೇವಾಲ ಅವರು ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ದೆಹಲಿಯ ಭವಿಕ್​ ಬನ್ಸಾಲ್​ ಮತ್ತು ಉತ್ತರ ಪ್ರದೇಶದ ಅಕ್ಷತ್​ ಕೌಶಿಕ್​ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಖಂದೇವಾಲ 701(99.99%) ಅಂಕವನ್ನು ಪಡೆಯುವ ಮೂಲಕ ಟಾಪರ್​ ಆಗಿದ್ದಾರೆ. ಬನ್ಸಾಲ್​ ಮತ್ತು ಕೌಸಿಕ್​ ಇಬ್ಬರು 700(99.99%) ಅಂಕವನ್ನು ಪಡೆದುಕೊಂಡಿದ್ದಾರೆ. ತೆಲಂಗಾಣ ಮೂಲದ ಮಾಧುರಿ ರೆಡ್ಡಿ ಜಿ 695(99.99%) ಅಂಕವನ್ನು ಪಡೆಯುವ ಮೂಲಕ ಏಳನೇ ರ‍್ಯಾಂಕ್​ ಗಳಿಸಿದ್ದು, ಪ್ರಮುಖ ಹತ್ತು ಟಾಪರ್​ಗಳಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದ ಒಬ್ಬಳೇ ಯುವತಿಯಾಗಿದ್ದಾಳೆ.​

ಕರ್ನಾಟಕದ ಡಿ.ಕೆ.ಫಣೀಂದ್ರ ಅವರು 36ನೇ ರ‍್ಯಾಂಕ್​​ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮರಾಗಿದ್ದಾರೆ.

ವೈದ್ಯಕೀಯ ಹಾಗೂ ಡೆಂಟಲ್ ಕೋರ್ಸ್​ಗಳ ಪ್ರವೇಶಾತಿಗೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ​ನೀಟ್​ ಯುಜಿ(NEET UG) 2019 ಪರೀಕ್ಷೆಯ ಮೇ 05 ಮತ್ತು 20 ರಂದು ನಡೆದಿತ್ತು. ಸುಮಾರು 14 ಲಕ್ಷ ಆಕಾಂಕ್ಷಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಅದರಲ್ಲಿ 6,30,283 ಹುಡುಗರು ಹಾಗೂ 7,80,467 ಹುಡುಗಿಯರು ಮತ್ತು ಐದು ಮಂದಿ ತೃತೀಯ ಲಿಂಗಿಗಳು ಪರೀಕ್ಷೆ ಬರೆದಿದ್ದರು. (ಏಜೆನ್ಸೀಸ್​)