2018 – 19 ನೇ ಸಾಲಿನ ‘ಸರ್ವೋತ್ತಮ ಸೇವಾ ಪ್ರಶಸ್ತಿ’

0
813

ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ 10 ಅಧಿಕಾರಿಗಳನ್ನು ರಾಜ್ಯ ಸರ್ಕಾರ ನೀಡುವ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ 10 ಅಧಿಕಾರಿಗಳನ್ನು ರಾಜ್ಯ ಸರ್ಕಾರ ನೀಡುವ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

2018–19ನೇ ಸಾಲಿನಲ್ಲಿ 29 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು. 16 ನಾಮನಿರ್ದೇಶಿತರ ವಿರುದ್ಧ ಇಲಾಖೆ ವಿಚಾರಣೆ, ಲೋಕಾಯುಕ್ತ, ನ್ಯಾಯಾಂಗ ತನಿಖೆ, ಕ್ರಿಮಿನಲ್ ಮೊಕದ್ದಮೆಗಳು ಇಲ್ಲವೆಂದು ದೃಢಪಡಿಸಿಕೊಂಡ ಬಳಿಕ ಆಯ್ಕೆ ಸಮಿತಿಯು ‍ಅರ್ಹರನ್ನು ಗುರುತಿಸಿದೆ.

ವಿನೂತನ, ನಾಗರಿಕರಿಗೆ ಅನುಕೂಲಕರವಾದ ಗುಣಾತ್ಮಕ ಸೇವೆ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ತೋರಿಸಿದ ಶ್ರಮ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಪ್ರಶಸ್ತಿಯು ತಲಾ 25 ಸಾವಿರ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಪುರಸ್ಕೃತರು: ಎ.ವಿ. ಪುಟ್ಟಚಂದ್ರು–ಹಿರಿಯ ಸಹಾಯಕ, ವೈದ್ಯಕೀಯ ಶಿಕ್ಷಣ ಇಲಾಖೆ, ಸಚಿವಾಲಯ, ಬೆಂಗಳೂರು. ಸಿ.ಎಸ್‌. ಅನುಸೂಯಾ– ಶುಶ್ರೂಷಾ ಅಧೀಕ್ಷಕಿ, ಮೆಗ್ಗಾನ್ ಆಸ್ಪತ್ರೆ, ಶಿವಮೊಗ್ಗ. ಬಿ.ಆರ್. ಸುಧಾಬಾಯಿ, ಜಿಲ್ಲಾ ಶುಶ್ರೂಷಾಧಿಕಾರಿ, ಆರೋಗ್ಯ ಶಿಕ್ಷಣ ಮತ್ತು ತರಬೇತಿ ವಿಭಾಗ, ಬೆಂಗಳೂರು. ಮಂಜುನಾಥ್ ವೀರಬಸಪ್ಪ ಹೊರಕೇರಿ–ಹಿರಿಯ ಆರೋಗ್ಯ ಸಹಾಯಕ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಹರಿಹರ. ಡಾ. ವಿ. ಮುನಿರಾಜು–ಜಂಟಿ ನಿರ್ದೇಶಕ(ಅಂಕಿ–ಅಂಶ), ಪಶುವೈದ್ಯಕೀಯ ಇಲಾಖೆ, ಬೆಂಗಳೂರು. ಡಾ. ಸಿದ್ದರಾಮಣ್ಣ– ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯಲಹಂಕ, ಬೆಂಗಳೂರು. ಎಂ.ಜಿ. ಪಾಲಿ–ಹಿರಿಯ ಸಹಾಯಕ ನಿರ್ದೇಶಕಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಇಲಾಖೆ, ಬೆಂಗಳೂರು.