2018 ರ” ಹಾಲೆ ಟೆನಿಸ್ ಟೂರ್ನಿ”ಯಲ್ಲಿ ಕ್ರೊವೇಷ್ಯಾದ ಬೋರ್ನಾ ಕೋರಿಕ್‌ಗೆ ಪ್ರಶಸ್ತಿ

0
26

ರೋಜರ್ ಫೆಡರರ್ ಅವರನ್ನು ಫೈನಲ್‌ನಲ್ಲಿ ಮಣಿಸಿದ ಕ್ರೊವೇಷ್ಯಾದ ಬೋರ್ನಾ ಕೋರಿಕ್‌ ಅವರು ಎಟಿಪಿ ಹಾಲೆ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಸೋಲಿನೊಂದಿಗೆ ಫೆಡರರ್‌ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡರು.

ಹಾಲೆ ವೆಸ್ಟ್‌ ಫಾಲೆನ್‌ (ಜರ್ಮನಿ): ರೋಜರ್ ಫೆಡರರ್ ಅವರನ್ನು ಫೈನಲ್‌ನಲ್ಲಿ ಮಣಿಸಿದ ಕ್ರೊವೇಷ್ಯಾದ ಬೋರ್ನಾ ಕೋರಿಕ್‌ ಅವರು ಎಟಿಪಿ ಹಾಲೆ ಟೂರ್ನಿಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಸೋಲಿನೊಂದಿಗೆ ಫೆಡರರ್‌ ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡರು.

ಜೂನ್ 24 ರ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಬೋರ್ನಾ ಅವರು ಫೆಡರರ್‌ ವಿರುದ್ಧ 7–6 (8/6),3–6, 6–2 ರಿಂದ ಗೆದ್ದರು. ಈ ಮೂಲಕ ಇಲ್ಲಿ ದಾಖಲೆಯ ಹತ್ತನೇ ಪ್ರಶಸ್ತಿ ಗೆಲ್ಲುವ ಫೆಡರರ್ ಕನಸನ್ನು ನುಚ್ಚುನೂರು ಮಾಡಿದರು. ಫೆಡರರ್‌ ಅವರ ಕುಸಿತದಿಂದಾಗಿ ರಫೆಲ್‌ ನಡಾಲ್ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದರು.

ಮೊದಲ ಸೆಟ್‌ನ ಟೈ ಬ್ರೇಕರ್‌ನಲ್ಲಿ ಫೆಡರರ್‌ ಅವರನ್ನು ಮಣಿಸಿದ ಬೋರ್ನಾ ಎರಡನೇ ಸೆಟ್‌ನಲ್ಲಿ ನಿರಾಸೆ ಕಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅಮೋಘ ಆಟವಾಡಿ ಗೆದ್ದರು.