2018 ರ ಪೋರ್ಬ್ಸ್ ಸಿರಿವಂತರ ಪಟ್ಟಿ : ಅಂಬಾನಿ ಹಿಂದಿಕ್ಕುವವರಿಲ್ಲ

0
1047

ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ 11 ನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ನವದೆಹಲಿ : ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ 11 ನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಮುಕೇಶ್ ಅವರ ಒಟ್ಟಾರೆ 3.45 ಲಕ್ಷ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಈ ವರ್ಷದಲ್ಲಿ ಅವರ ಸಂಪತ್ತು ಮೌಲ್ಯದಲ್ಲಿ ಗರಿಷ್ಠ ಗಳಿಕೆಯನ್ನೂ ಅವರು ಸಾಧಿಸಿದ್ದಾರೆ. 67,890 ಕೋಟಿಯಷ್ಟು ಹೆಚ್ಚಾಗಿದೆ. ರಿಲಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಟೆಲಿಕಾಂ ಸರ್ವೀಸಸ್ ನ ಯಶಸ್ಸಿನಿಂದಾಗಿ ಸಾಧ್ಯವಾಗಿದೆ ಎಂದು ಪೋರ್ಬ್ಸ್ ವಿಶ್ಲೇಷಣೆ ಮಾಡಿದೆ.

ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮಜಿ ಅವರು ಎರಡನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಅವರ ಆಸ್ತಿ ಮೌಲ್ಯ 1.53 ಲಕ್ಷ ಕೋಟಿಗಳಷ್ಟಿದೆ. ಆರ್ಸೆಲರ್ ಮಿತ್ತಲ್ ಅಧ್ಯಕ್ಷ ಲಕ್ಷ್ಮೀ ಮಿತ್ತಲ್ ಅವರು ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಲಕ್ಷ್ಮೀ ಮಿತ್ತಲ್ ಅವರು ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.ಅವರ ಆಸ್ತಿ ಮೌಲ್ಯ 1.21 ಲಕ್ಷ ಕೋಟಿಗಳಷ್ಟಿದೆ. ಹಿಂದೂಜಾ ಸಹೋದರರು ನಾಲ್ಕನೇ ಸ್ಥಾನವನ್ನು, ಪಲ್ಲೊಂಜಿ ಮಿಸ್ತ್ರೀ ಐದನೇ ಸ್ಥಾನವನ್ನು ಪಡೆದಿರುವರು.

100 ರಲ್ಲಿ 11 ಸಿರಿವಂತರ ಸಂಪತ್ತು 7,300 ಕೋಟಿ ಅಥವಾ ಅದಕ್ಕೂ ಹೆಚ್ಚು ಏರಿಕೆಯಾಗಿದೆ.

ಏಕೈಕ ಮಹಿಳೆ : ಸಿರಿವಂತರ ಪಟ್ಟಿಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಮ್ ದಾರ್ ಷಾ ಅವರು ಮಾತ್ರವೇ 39 ನೇ ಸ್ಥಾನ ಪಡೆದಿದ್ದಾರೆ. ಅವರ ಸಂಪತ್ತು ಮೌಲ್ಯ ಶೇ 66.7 ರಷ್ಟು ಹೆಚ್ಚಾಗಿದ್ದು, 26,280 ಕೋಟಿಗೆ ತಲುಪಿದೆ.