2018 ರ ದಕ್ಷಿಣ ಏಷ್ಯನ್‌ ಸೀನಿಯರ್‌ ಜೂಡೊ ಚಾಂಪಿಯನ್‌ಷಿಪ್‌ : ಭಾರತಕ್ಕೆ 10 ಚಿನ್ನದ ಪದಕ

0
24

ಭಾರತ ತಂಡದ ಜೂಡೊ ಸ್ಪರ್ಧಿಗಳು 2018 ಏಪ್ರೀಲ್ 22 ರ ಭಾನುವಾರ ಮುಕ್ತಾಯಗೊಂಡ ಎಂಟನೇ ದಕ್ಷಿಣ ಏಷ್ಯನ್‌ ಸೀನಿಯರ್‌ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ 10 ಚಿನ್ನದ ಪದಕ ಹಾಗೂ 3 ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ನವದೆಹಲಿ: ಭಾರತ ತಂಡದ ಜೂಡೊ ಸ್ಪರ್ಧಿಗಳು ಭಾನುವಾರ ಮುಕ್ತಾಯಗೊಂಡ ಎಂಟನೇ ದಕ್ಷಿಣ ಏಷ್ಯನ್‌ ಸೀನಿಯರ್‌ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ  10 ಚಿನ್ನದ ಪದಕ ಹಾಗೂ 3 ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಸ್ಪರ್ಧೆಯಲ್ಲಿದ್ದ ಎಲ್ಲ ಏಳು ಮಹಿಳಾ ಜೂಡೊ ಆಟಗಾರರರು ಚಿನ್ನ ಗೆದ್ದು ಅಮೋಘ ಸಾಧನೆ ಮಾಡಿದ್ದಾರೆ. ಪುರುಷ ತಂಡದ ಮೂವರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಚಿನ್ನದ ಪದಕ ಪಡೆದವರು: ಎಲ್‌. ಸುಶೀಲಾ ದೇವಿ (48 ಕೆ.ಜಿ.),  ಟಿ. ಕಲ್ಪನಾ ದೇವಿ (52 ಕೆ.ಜಿ.), ಎ. ಅನಿತಾ ಚಾನು (57 ಕೆ.ಜಿ.), ಎಚ್‌. ಸುನಿಬಾಲಾ ದೇವಿ (63 ಕೆ.ಜಿ.), ಗರಿಮಾ ಚೌಧರಿ (70 ಕೆ.ಜಿ.), ಸಿ. ಜೀನಾ ದೇವಿ (78 ಕೆ.ಜಿ.), ಟುಲಿಕಾ ಮಾನ್‌ (78 ಕೆ.ಜಿ.), ವಿಜಯ್‌ ಕುಮಾರ್‌ ಯಾದವ್‌ (60 ಕೆ.ಜಿ.), ಅಜಯ್‌ ಯಾದವ್‌ (73 ಕೆ.ಜಿ.), ದಿವೇಶ್‌ (81 ಕೆ.ಜಿ.)

ಕಂಚಿನ ಪದಕ ಪಡೆದವರು: ಅಂಕಿತ್‌ ಬಿಷ್ಟ್‌ (66 ಕೆ.ಜಿ.), ಜೋಬನ್‌ದೀಪ್‌ ಸಿಂಗ್‌ (90 ಕೆ.ಜಿ.), ಉದಯ್‌ವೀರ್‌ ಸಿಂಗ್‌ (100 ಕೆ.ಜಿ.).