2018 ರ ಕಾಮನ್ ವೆಲ್ತ್ ಕ್ರೀಡಾಕೂಟ : ಇತಿಹಾದ ಬರೆದ ಮಣಿಕಾ–ಮಾಮಾ ಜೋಡಿ

0
19

ಹಾಲಿ ಚಾಂಪಿಯನ್‌ ಫೆಂಗ್ ತಿಯಾನ್‌ವಿ ಮತ್ತು ಯು ಮೆಂಗ್ಯು ಅವರಿಗೆ ಪ್ರಬಲ ಪೈಪೋಟಿ ನೀಡಿದ ಭಾರತದ ಮಣಿಕಾ ಭಾತ್ರಾ ಮತ್ತು ಮೌಮಾ ದಾಸ್‌ ಬೆಳ್ಳಿ ಪದಕ ಗೆದ್ದರು.

ಗೋಲ್ಡ್ ಕೋಸ್ಟ್‌: ಹಾಲಿ ಚಾಂಪಿಯನ್‌ ಫೆಂಗ್ ತಿಯಾನ್‌ವಿ ಮತ್ತು ಯು ಮೆಂಗ್ಯು ಅವರಿಗೆ ಪ್ರಬಲ ಪೈಪೋಟಿ ನೀಡಿದ ಭಾರತದ ಮಣಿಕಾ ಭಾತ್ರಾ ಮತ್ತು ಮೌಮಾ ದಾಸ್‌ ಬೆಳ್ಳಿ ಪದಕ ಗೆದ್ದರು.

ಕಾಮನ್‌ವೆ‌ಲ್ತ್ ಕೂಟದ ಟೇಬಲ್ ಟೆನಿಸ್‌ನ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸೋತು ಇವರಿಬ್ಬರು ಈ ವಿಭಾಗದಲ್ಲಿ ಭಾರತಕ್ಕೆ ಮೊತ್ತಮೊದಲ ಬೆಳ್ಳಿ ಗಳಿಸಿಕೊಟ್ಟ ಸಾಧನೆ ಮಾಡಿದರು. ಎದುರಾಳಿ, ಸಿಂಗಪುರ ಜೋಡಿ 11–5, 11–4, 11–5ರಿಂದ ಭಾರತದ ಆಟಗಾರರ ಸವಾಲನ್ನು ಮೀರಿನಿಂತರು.

‘ಪಂದ್ಯದಲ್ಲಿ ನಮ್ಮ ಯೋಜನೆಗಳು ಫಲಿಸಲಿಲ್ಲ. ಎದುರಾಳಿಗಳು ಉತ್ತಮ ಸಾಮರ್ಥ್ಯ ತೋರಿದರು. ತಂಡ ವಿಭಾಗದಲ್ಲಿ ಇದೇ ಜೋಡಿ ಯನ್ನು ಮಣಿಸಿದ್ದ ನಾವು ಇಲ್ಲಿ ಭರವಸೆಯಿಂದಲೇ ಕಣಕ್ಕೆ ಇಳಿದಿದ್ದೆವು. ಆದರೆ ಜಯ ನಮ್ಮ ಕೈ ಹಿಡಿಯಲಿಲ್ಲ’ ಎಂದು ಮಣಿಕಾ ಹೇಳಿದರು.

ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಸುತೀರ್ಥ ಮುಖರ್ಜಿ ಮತ್ತು ಪೂಜಾ ಸಹಸ್ರಬುದ್ಧೆ ಅವರನ್ನು ಮಲೇಷ್ಯಾದ ಯಿಂಗ್ ಹೋ ಮತ್ತು ಕರೇನ್‌ ಲಿನ್‌ ಜೋಡಿ 15–13, 11–7, 8–11, 11–7 ರಿಂದ ಸೋಲಿಸಿದರು.