2018 ರ ಏಷ್ಯನ್ ಕ್ರೀಡಾಕೂಟ :ಸೈಲಿಂಗ್‌ ಕ್ರೀಡೆಯಲ್ಲಿ ಭಾರತಕ್ಕೆ 3 ಪದಕ

0
484

ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2018 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೈಲಿಂಗ್‌ನಲ್ಲಿ ಮೂರು ಪದಕಗಳು ಭಾರತದ ಪಾಲಾಗಿವೆ.

ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ 2018 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೈಲಿಂಗ್‌ನಲ್ಲಿ ಮೂರು ಪದಕಗಳು ಭಾರತದ ಪಾಲಾಗಿವೆ.

ಇಂದು ನಡೆದ 49ಇಆರ್‌ ಎಫ್‌ಎಕ್ಸ್‌ ಮಹಿಳಾ ವಿಭಾಗದಲ್ಲಿ ವರ್ಷಾ ಗೌತಮ್‌ ಮತ್ತು ಶ್ವೇತಾ ಶೇರ್ವೇಗಾರ್‌ ಬೆಳ್ಳಿ ಪದಕವನ್ನು ಪಡೆದಿದ್ದರೆ, ಹರ್ಷಿತಾ ತೋಮರ್‌ ಓಪನ್ ಲೇಸರ್ 4.7ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದಲ್ಲದೆ ವರುಣ್‌ ತಾಕ್ಕರ್‌ ಅಶೋಕ್‌ ಮತ್ತು ಚೆಂಗಪ್ಪ ಗಣಪತಿ ಕೆಲಪಾಂದ 49ಇಆರ್‌ ಪುರುಷರ ವಿಭಾಗದಲ್ಲಿ ಒಟ್ಟಾರೆ 53 ಅಂಕಗಳೊಂದಿಗೆ ಕಂಚಿನ ಪದಕವನ್ನು ಗಳಿಸಿದ್ದಾರೆ.

20 ವರ್ಷದ ವರ್ಷಾ ಮತ್ತು 27 ವರ್ಷದ ಶ್ವೇತಾ ಜತೆಯಾಡಿ 15 ನೇ ರೇಸ್‌ನಲ್ಲಿ ಎರಡನೆಯವರಾಗಿ ಪಂದ್ಯವನ್ನು ಪೂರ್ಣಗೊಳಿಸಿದ್ದರು. 16 ವರ್ಷದ ಹರ್ಷಿತಾ ತೋಮರ್‌ ರೇಸ್‌ 12ರಲ್ಲಿ 62 ಅಂಕಗಳನ್ನು ಕಲೆ ಹಾಕುವ ಮೂಲಕ ಮೂರನೇಯವರಾಗಿ ಕಂಚನ್ನು ಪಡೆದರು.

ಈ ಕುರಿತು ಪ್ರತಿಕ್ರಿಯಿಸಿರುವ ಹರ್ಷಿತಾ, ದೇಶಕ್ಕಾಗಿ ಪದಕವನ್ನು ಗೆಲ್ಲುವುದೇ ಒಂದು ಅದ್ಭುತ ಭಾವನೆ. ಅದನ್ನು ನಾನು ವರ್ಣಿಸಲಾರೆ. ಇದೊಂದು ನನಗೆ ಕಲಿಕೆಯ ಉತ್ತಮ ಅನುಭವವಾಗಿದೆ ಎಂದು ತಿಳಿಸಿದ್ದಾರೆ.

ಇದಲ್ಲದೆ ಸೈಲಿಂಗ್‌ನಲ್ಲಿ ಗೋವಿಂದ್ ಬೈರಗಿ ಓಪನ್‌ ಲೇಸರ್‌ 4.7ನಲ್ಲಿ ನಾಲ್ಕನೆಯವರಾಗಿ ಮತ್ತು ನೇತ್ರಾ ಕುಮಾನನ್‌ ಐದನೆಯವರಾಗಿ ಸೈಲಿಂಗ್‌ನಲ್ಲಿ ಸ್ಥಾನ ಪಡೆದರು. (ಏಜೆನ್ಸೀಸ್)