2018 ರ ಏಷ್ಯನ್ ಕ್ರೀಡಾಕೂಟ : ಕುರಾಶ್ ಕ್ರೀಡಾ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ-ಕಂಚಿನ ಪದಕಗಳ ಸಾಧನೆ

0
606

ಇಂಡೋನೇಷ್ಯಾದ ಜಕಾರ್ತ ಹಾಗೂ ಪ್ಯಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಕುರಾಶ್ ವಿಭಾಗದಲ್ಲಿ ಭಾರತೀಯ ಸ್ಪರ್ಧಿಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಜಕಾರ್ತ: ಇಂಡೋನೇಷ್ಯಾದ ಜಕಾರ್ತ ಹಾಗೂ ಪ್ಯಾಲೆಂಬಾಂಗ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಕುರಾಶ್ ವಿಭಾಗದಲ್ಲಿ ಭಾರತೀಯ ಸ್ಪರ್ಧಿಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. 

ಕುರಾಶ್ ಮಹಿಳೆಯರ 52 ಕೆ.ಜಿ. ವಿಭಾಗದಲ್ಲಿ ಭಾರತದ ಪಿಂಕಿ ಬಲ್ಹಾರ ಮತ್ತು ಮಲಪ್ರಭಾ ಯಲ್ಲಪ್ಪ ಜಾಧವ್ ಅನುಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. 

ನಿಮ್ಮ ಮಾಹಿತಿಗಾಗಿ, ಒಂದು ವಿಧದ ರೆಸ್ಲಿಂಗ್ ಸ್ಪರ್ಧೆಯಾಗಿರುವ ಕುರಾಶ್ ಕ್ರೀಡೆಯನ್ನು ಪ್ರಮುಖವಾಗಿ ಏಷ್ಯಾದ ಮಧ್ಯಭಾಗದಲ್ಲಿ ಅತಿ ಹೆಚ್ಚು ಅಭ್ಯಾಸಿಸಲಾಗುತ್ತಿದೆ. 

ಇದೀಗ ಕುರಾಶ್ ವಿಭಾಗದಲ್ಲಿ ಭಾರತೀಯ ಸ್ಪರ್ಧಿಗಳು ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 

19ರ ಹರೆಯದ ಪಿಂಕಿ, ಚಿನ್ನಕ್ಕಾಗಿನ ಹೋರಾಟದಲ್ಲಿ ಉಜ್ಬೇಕಿಸ್ತಾನದ ಗುಲ್ಮನೊರ್ ಸೂಲೈಮನೋವಾ ವಿರುದ್ಧ 10-0ರ ಅಂತರದಲ್ಲಿ ಸೋಲು ಅನುಭವಿಸಿದರು. ಈ ಮೊದಲು ಸೆಮಿಫೈನಲ್‌ನಲ್ಲಿ ಸೂಲೈಮನೋವಾ ವಿರುದ್ಧವೇ ಸೋಲು ಅನುಭವಿಸಿರುವ ಯಲ್ಲಪ್ಪ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.