2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ; ಸೆಪಕ್‌ಟಕ್ರಾದಲ್ಲಿ ಭಾರತಕ್ಕೆ ಚೊಚ್ಚಲ ಪದಕ

0
914

ಇಂಡೋನೇಷ್ಯಾದ ಜಕರ್ತಾ ಮತ್ತು ಪ್ಯಾಲೆಂಬಂಗ್ ನಗರಗಳಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಟೂರ್ನಮೆಂಟ್‌ನ ಸೆಪಕ್‌ಟಕ್ರಾ (ಕಿಕ್ ವಾಲಿಬಾಲ್) ವಿಭಾಗದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ.

ಹೊಸದಿಲ್ಲಿ: ಇಂಡೋನೇಷ್ಯಾದ ಜಕರ್ತಾ ಮತ್ತು ಪ್ಯಾಲೆಂಬಂಗ್ ನಗರಗಳಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2018 ಟೂರ್ನಮೆಂಟ್‌ನ ಸೆಪಕ್‌ಟಕ್ರಾ (ಕಿಕ್ ವಾಲಿಬಾಲ್) ವಿಭಾಗದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. 

ಪುರುಷರ ಟೀಮ್ ರೆಗು ವಿಭಾಗದಲ್ಲಿ ಭಾರತ ಕಂಚಿನ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ. ಇದು ಏಷ್ಯನ್ ಕ್ರೀಡಾಕೂಟದಲ್ಲಿ ಸೆಪಕ್‌ಟಕ್ರಾ (Sepaktakraw ) ವಿಭಾಗದಲ್ಲಿ ದೇಶಕ್ಕೆ ದಕ್ಕಿರುವ ಮೊದಲ ಪದಕವೂ ಹೌದು. 

ಮಂಗಳವಾರ ಥಾಯ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 0-2ರ ಅಂತರದಲ್ಲಿ ಸೋಲನುಭವಿಸಿತು. ಈ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. 

ಈ ಮೊದಲು ಸೆಮಿಫೈನಲ್ ಹಂತಕ್ಕೆ ತಲುಪಿದ ಭಾರತ ತಂಡ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸುವ ಮೂಲಕ ಐತಿಹಾಸಿಕ ಸಾಧನೆ ಬರೆದಿತ್ತು. 

ಸೆಪಕ್‌ಟಕ್ರಾ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರ ಪಟ್ಟಿ ಇಂತಿದೆ: ಕುಮಾರ್ ಸಂದೀಪ್, ಯುಮ್ನಂ ಆಕಾಶ್, ಡಬ್ಲ್ಯು ಸಿಂಗ್, ಕುಮಾರ್ ಹರೀಶ್, ಎಸ್‌ಎಂ ಸಿಂಗ್, ಕೆ ನಿಕೇನ್ ಸಿಂಗ್, ಟಿಎಸ್ ಸಿಂಗ್, ದೀರಜ್, ಜೋತಿನ್ ಸಿಂಗ್, ಕುಮಾರ್ ಲಲಿತ್, ಡಬ್ಲ್ಯು ಸಂಜೇಕ್ ಸಿಂಗ್ ಮತ್ತು ಜಿ ಜಿತೇಶೋರ್ ಶರ್ಮಾ.