2018 ರ ಏಷ್ಯನ್‌ ಪ್ಯಾರಾ ಕ್ರೀಡಾಕೂಟ: ಭಾರತದ ಅಥ್ಲೀಟ್‌ ಗಳ ಗರಿಷ್ಠ ಸಾಧನೆ

0
545

ಅಮೋಘ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಒಟ್ಟು 72 ಪದಕಗಳನ್ನು ಬಗಲಿಗೆ ಹಾಕಿಕೊಂಡು ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದರು. 15 ಚಿನ್ನ, 24 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು ಗಳಿಸಿದ ಭಾರತ ಕೂಟದಲ್ಲಿ ಈ ವರೆಗಿನ ಗರಿಷ್ಠ ಸಾಧನೆ ಮಾಡಿತು.

ಜಕಾರ್ತ, ಇಂಡೊನೇಷ್ಯಾ (ಪಿಟಿಐ): ಅಮೋಘ ಸಾಧನೆ ಮಾಡಿದ ಭಾರತದ ಕ್ರೀಡಾಪಟುಗಳು ಒಟ್ಟು 72 ಪದಕಗಳನ್ನು ಬಗಲಿಗೆ ಹಾಕಿಕೊಂಡು ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡಿದರು. 15 ಚಿನ್ನ, 24 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು ಗಳಿಸಿದ ಭಾರತ ಕೂಟದಲ್ಲಿ ಈ ವರೆಗಿನ ಗರಿಷ್ಠ ಸಾಧನೆ ಮಾಡಿತು.

172 ಚಿನ್ನದೊಂದಿಗೆ 319 ಪದಕಗಳನ್ನು ಗಳಿಸಿದ ಚೀನಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದರೆ, ದಕ್ಷಿಣ ಕೊರಿಯಾ 53 ಚಿನ್ನದೊಂದಿಗೆ 125 ಪದಕ ಗೆದ್ದು ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು. ಮೂರನೇ ಸ್ಥಾನ ಗಳಿಸಿದ ಇರಾನ್‌ 51 ಚಿನ್ನ, 42 ಬೆಳ್ಳಿ ಮತ್ತು 43 ಕಂಚು ಗೆದ್ದಿತು. ಪಟ್ಟಿಯಲ್ಲಿ ಭಾರತ ಒಂಬತ್ತನೇ ಸ್ಥಾನ ಹೊಂದಿದೆ. ಕಳೆದ ಬಾರಿ ಭಾರತ 3 ಚಿನ್ನ, 14 ಬೆಳ್ಳಿ ಮತ್ತು 16 ಕಂಚು ಗಳಿಸಿತ್ತು.

ಕೊನೆಯ ದಿನವಾದ ಅಕ್ಟೋಬರ್ 13 ರ ಶನಿ ವಾರ ಎಸ್‌ಎಲ್‌3 ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪ್ರಮೋದ್ ಭಗತ್‌ ಚಿನ್ನ ಗೆದ್ದರು. ಇಂಡೊನೇಷ್ಯಾದ ಉಕುನ್‌ ರಕೇಂಡಿ ವಿರುದ್ಧ ಅವರು 21–19, 15–21, 21–14ರಿಂದ ಜಯ ಸಾಧಿಸಿ ದರು. ಎಸ್‌ಎಲ್‌4 ವಿಭಾಗದಲ್ಲಿ ತರುಣ್‌ 21–16, 21–6ರಿಂದ ಚೀನಾದ ಯುಯಾಂಗ್ ಗೋ ಎದುರು ಗೆದ್ದು ಚಿನ್ನದ ಪದಕ ತಮ್ಮದಾಗಿಸಿಕೊಂಡರು.