2018 ರ ಆಗಸ್ಟ್ ನ “ಫಿಫಾ ರ‍್ಯಾಂಕಿಂಗ್”: ಫ್ರಾನ್ಸ್‌ ನಂ.1, ಭಾರತ ನಂ.96

0
96

ಬಹು ನಿರೀಕ್ಷಿತ ಫಿಫಾ ರ‍್ಯಾಂಕಿಂಗ್ ಆಗಸ್ಟ್ 16 ರ ಗುರುವಾರ ಬಿಡುಗಡೆಗೊಂಡಿದ್ದು, ಪ್ರಸಕ್ತ ಸಾಲಿನ ವಿಶ್ವಕಪ್‌ ವಿಜೇತ ಫ್ರಾನ್ಸ್‌ ಫುಟ್ಬಾಲ್‌ ತಂಡ ಅಗ್ರ ಪಟ್ಟದಲ್ಲಿ ವಿರಾಜಮಾನವಾಗಿದೆ. ಫ್ರಾನ್ಸ್‌ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಗಳಿಸಿರುವುದು 16 ವರ್ಷಗಳ ಬಳಿಕ ಇದೇ ಮೊದಲು.

ಎಪಿ ಜೂರಿಚ್‌: ಬಹು ನಿರೀಕ್ಷಿತ ಫಿಫಾ ರ‍್ಯಾಂಕಿಂಗ್ ಆಗಸ್ಟ್ 16 ರ  ಗುರುವಾರ ಬಿಡುಗಡೆಗೊಂಡಿದ್ದು, ಪ್ರಸಕ್ತ ಸಾಲಿನ ವಿಶ್ವಕಪ್‌ ವಿಜೇತ ಫ್ರಾನ್ಸ್‌ ಫುಟ್ಬಾಲ್‌ ತಂಡ ಅಗ್ರ ಪಟ್ಟದಲ್ಲಿ ವಿರಾಜಮಾನವಾಗಿದೆ. ಫ್ರಾನ್ಸ್‌ ತಂಡ ಫಿಫಾ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಗಳಿಸಿರುವುದು 16 ವರ್ಷಗಳ ಬಳಿಕ ಇದೇ ಮೊದಲು. 

ಕಳೆದ ತಿಂಗಳು ವಿಶ್ವ ಕಪ್‌ ಫೈನಲ್‌ನಲ್ಲಿ ಕ್ರೊಯೇಷ್ಯಾ ತಂಡವನ್ನು 4-2 ಗೋಲುಗಳ ಅಂತರದಿಂದ ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿದ್ದ ಫ್ರೆಂಚರು ಇದಕ್ಕೂ ಮೊದಲು 2002ರಲ್ಲಿ ನಂ.1 ಪಟ್ಟಕ್ಕೇರಿದ್ದರು. ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ತಂಡಕ್ಕೆ ಮಣಿದ ಬೆಲ್ಜಿಯಂ ತಂಡ 2ನೇ ಸ್ಥಾನಕ್ಕೆ ಬಡ್ತಿ ಪಡೆದರೆ, ಕ್ವಾರ್ಟರ್‌ಫೈನಲ್‌ನಲ್ಲಿ ಬೆಲ್ಜಿಯಂ ತಂಡಕ್ಕೆ ಶರಣಾಗಿದ್ದ ಬ್ರೆಜಿಲ್‌ಗೆ 3ನೇ ಸ್ಥಾನ ಪ್ರಾಪ್ತಿಯಾಗಿದೆ. ಪ್ರಶಸ್ತಿ ಸುತ್ತಿನಲ್ಲಿ ಫ್ರಾನ್ಸ್‌ ವಿರುದ್ಧ ಮಂಡಿಯೂರಿದ ಕ್ರೊಯೇಷ್ಯಾ 16 ಸ್ಥಾನ ಉನ್ನತಿ ಕಂಡು 4ನೇ ಸ್ಥಾನದಲ್ಲಿದೆ. 

ವಿಶ್ವ ಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ ಉರುಗ್ವೆ ತಂಡ 9 ಸ್ಥಾನ ಮೇಲಕ್ಕೆ ಜಿಗಿದು 5ನೇ ಸ್ಥಾನ ಗಳಿಸಿದರೆ, ಸೆಮಿಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್‌ಗೆ (12ರಿಂದ) 6ನೇ ಸ್ಥಾನ ದಕ್ಕಿದೆ. ಹಿಂದಿನ ಆವೃತ್ತಿಯ ಚಾಂಪಿಯನ್‌ ಜರ್ಮನಿ ಈ ಬಾರಿ ಗುಂಪಿನ ಹಂತದಲ್ಲೇ ನಿರ್ಗಮಿಸಿದ್ದರಿಂದ ರಾರ‍ಯಂಕಿಂಗ್‌ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಕುಸಿದಿದೆ. 

ಇನ್ನು, ಈ ಬಾರಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದ ರಷ್ಯಾ ತಂಡ 21 ಸ್ಥಾನಗಳ ಬಡ್ತಿಯೊಂದಿಗೆ 49ನೇ ಸ್ಥಾನ ಪಡೆದರೆ, ಭಾರತ 96ನೇ ಸ್ಥಾನದಲ್ಲಿದೆ.