2018 ರಿಂದ ಗೂಗಲ್ ಕ್ರೋಮ್ ನಲ್ಲಿ ರೀಡೈರೆಕ್ಟ್ ಹಾವಳಿ ಇಲ್ಲ.

0
24

ಗೂಗಲ್ ಕ್ರೋಮ್ ಹೊಸ ವರ್ಷದಿಂದ ರೀಡೈರೆಕ್ಟ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಯೋಜನೆ ರೂಪಿಸಿದ್ದು, 2018 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ.

ಗೂಗಲ್ ಕ್ರೋಮ್ ಹೊಸ ವರ್ಷದಿಂದ ರೀಡೈರೆಕ್ಟ್ ಜಾಹೀರಾತುಗಳನ್ನು ಬ್ಲಾಕ್ ಮಾಡಲು ಯೋಜನೆ ರೂಪಿಸಿದ್ದು, 2018 ರಿಂದಲೇ ಜಾರಿಗೆ ತರಲು ನಿರ್ಧರಿಸಿದೆ. 
 
ಕ್ರೋಮ್ ನ ಪೋಪ್ ಅಪ್ ಬ್ಲಾಕರ್ ಹಾಗೂ ಆಟೋ ಪ್ಲೇ ಪ್ರೊಟೆಕ್ಷನ್ ನಂತೆಯೇ, ಹೊಸ ಪ್ರೊಟೆಕ್ಷನ್ ಟೂಲ್ ಗಳನ್ನು ಕ್ರೋಮ್ ಜಾರಿಗೆ ತರಲು ಉದ್ದೇಶಿಸಿದ್ದು, ಬಳಕೆದಾರರಿಗೆ ಎಲ್ಲಾ ರೀತಿಯ ರಕ್ಷಣೆ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ. ಗ್ರಾಹಕರಿಗೆ ಕಿರಿಕಿರಿಯನ್ನುಂಟುಮಾಡುವ ರೀಡೈರೆಕ್ಟ್ ಜಾಹೀರಾತುಗಳನ್ನು ತಡೆಗಟ್ಟಲು ಕ್ರೋಮ್ ಈ ಕ್ರಮ ಕೈಗೊಂಡಿದ್ದು, ಕೆಲವೊಮ್ಮೆ ಏಕಾಏಕಿಯಾಗಿ ಕಾರಣವೇ ಇಲ್ಲದೇ ಹೊಸ ಪೇಜ್ ಗೆ ಕೊಂಡೊಯ್ಯುತ್ತದೆ ಎಂದು ಗೂಗಲ್ ಗೆ ಫೀಡ್ ಬ್ಯಾಕ್ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲು ಗೂಗಲ್ ಕ್ರೋಮ್ ಮುಂದಾಗಿದೆ.