2018 ಮಾರ್ಚ್ ತಿಂಗಳಲ್ಲಿ ಚಂದ್ರಯಾನ-2

0
45

ಚಂದ್ರನ ಮೇಲೆ ಮತ್ತೆ ಕಾಲಿಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. 2018 ಮಾರ್ಚ್ ತಿಂಗಳಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಚಂದ್ರಯಾನ-1 ಯಶಸ್ಸಿನ ಬಳಿಕ ಈಗ ಎರಡನೇ ಯೋಜನೆಗೆ ಇಸ್ರೋ ಸನ್ನದ್ಧವಾಗಿದೆ.

ಚಂದ್ರಯಾನ-2 ಉಪಗ್ರಹವನ್ನು ಜಿಎಸ್​ಎಲ್​ವಿ ಎಂಕೆ 2 ಉಡಾಹಕದ ಮೂಲಕ ಉಡಾವಣೆ ಮಾಡಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ಚಂದ್ರನ ಕಕ್ಷೆಯತ್ತ ಚಿಮ್ಮಲಿದೆ. ಜಿ.ಎಸ್.​ಎಲ್.​ವಿ ಎಂ.ಕೆ 2 ಭಾರತದಲ್ಲೇ ಅಭಿವೃದ್ಧಿಪಡಿಸಿದ ಅತಿ ದೊಡ್ಡ ಲಾಂಚ್ ವೆಹಿಕಲ್ ಆಗಿದೆ. ಇದು 3,250 ಕೆ.ಜಿ ಇದೆ. ಇದರಲ್ಲಿ ಆರ್ಬಿಟರ್, ಲ್ಯಾಂಡರ್ ಹಾಗೂ ರೊವರ್ ನೌಕೆ ಕಳುಹಿಸಲಾಗುತ್ತದೆ. ಲ್ಯಾಂಡರ್ ಚಂದ್ರನ ವಾತಾವರಣ ಕುರಿತ ಮಾಹಿತಿ ಕಲೆಹಾಕುತ್ತದೆ. ರೊವರ್ ಬಳಸಿಕೊಂಡು ಹೊಸ ಪ್ರಯೋಗಗಳನ್ನು ನಡೆಸಿ ಮಾಹಿತಿ ನೀಡುತ್ತದೆ.

ಚಂದ್ರನ ಮೇಲೆ ಬಾಹ್ಯಾಕಾಶ ನಿಲ್ದಾಣ

ಚಂದ್ರನ ಮೇಲೆ ಮೊದಲ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮಾಡುವ ನಾಸಾ ನೇತೃತ್ವದ ಯೋಜನೆಗೆ ಸಹಕಾರ ನೀಡಲು ಅಮೆರಿಕ-ರಷ್ಯಾ ಒಪ್ಪಂದ ಮಾಡಿಕೊಂಡಿವೆ. ಇದು ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳಿಸುವ ಯೋಜನೆಯ ಒಂದು ಭಾಗವಾಗಿದೆ. ಈ ಮೂಲಕ ಹೊಸ ಸಂಶೋಧನೆಗೆ ಉಭಯ ರಾಷ್ಟ್ರಗಳು ಮುಂದಾಗಿವೆ.

ಚಂದ್ರಯಾನ-2 ವಿಶೇಷತೆ

# 2018 ಮಾರ್ಚ್ ಉಡಾವಣೆ

2,650 ಹೊರುವ ಭಾರ (ಕೆಜಿ)

596 ವೆಚ್ಚ (ಕೋಟಿ ರೂ.)

ಉಡಾವಣಾ ವಾಹಕ: ಜಿಎಸ್​ಎಲ್​ವಿ ಎಂಕೆ 2