2018 ಪ್ಯಾರಾ ಏಷ್ಯನ್‌ ಕ್ರೀಡಾಕೂಟ :ತಂಗವೇಲು ಭಾರತದ ಧ್ವಜಧಾರಿ

0
718

ಭಾರತದ ಹೈಜಂಪ್‌ ಪಟು ತಂಗವೇಲು ಮರಿಯಪ್ಪನ್‌, ಅಕ್ಟೋಬರ್‌ 6 ರಿಂದ ಆರಂಭವಾಗಲಿರುವ ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ನವದೆಹಲಿ (ಪಿಟಿಐ): ಭಾರತದ ಹೈಜಂಪ್‌ ಪಟು ತಂಗವೇಲು ಮರಿಯಪ್ಪನ್‌, ಅಕ್ಟೋಬರ್‌ 6 ರಿಂದ ಆರಂಭವಾಗಲಿರುವ ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಪ್ಯಾರಾ ಏಷ್ಯನ್‌ ಕೂಟ ಅಕ್ಟೋಬರ್‌ 6ರಿಂದ 13ರವರೆಗೆ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯಲಿದೆ. ಈ ಕೂಟದಲ್ಲಿ ಭಾರತದ ಒಟ್ಟು 302 ಮಂದಿ ಭಾಗವಹಿಸಲಿದ್ದಾರೆ. ಇದರಲ್ಲಿ ಅಥ್ಲೀಟ್‌ಗಳು, ಕೋಚ್‌ ಮತ್ತು ನೆರವು ಸಿಬ್ಬಂದಿ ಸೇರಿದ್ದಾರೆ.

ಸೋಮವಾರ ಜಕಾರ್ತ ತಲುಪಿದ ಭಾರತ ತಂಡದವರಿಗೆ ಕ್ರೀಡಾ ಗ್ರಾಮ ಪ್ರವೇಶ ನಿರ್ಬಂಧಿಸಲಾಯಿತು. ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿತು. ತಂಗವೇಲು ಅವರು ರಿಯೊ ಪ್ಯಾರಾಲಿಂಪಿಕ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.