ತಬಲಾ ಮಾಂತ್ರಿಕ ಜಾಕಿರ್ ಹುಸೇನ್, ನೃತ್ಯ ಕಲಾವಿದರಾದ ಕೆ. ಕಲ್ಯಾಣಸುಂದರಂ ಪಿಳ್ಳೆ, ಸೋನಲ್ ಮಾನ್ಸಿಂಗ್ ಹಾಗೂ ಜತಿನ್ ಗೋಸ್ವಾಮಿ ಅವರನ್ನು 2018 ನೇ ಸಾಲಿನ ‘ಸಂಗೀತ ನಾಟಕ ಅಕಾಡೆಮಿ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವದೆಹಲಿ: ತಬಲಾ ಮಾಂತ್ರಿಕ ಜಾಕಿರ್ ಹುಸೇನ್, ನೃತ್ಯ ಕಲಾವಿದರಾದ ಕೆ. ಕಲ್ಯಾಣಸುಂದರಂ ಪಿಳ್ಳೆ, ಸೋನಲ್ ಮಾನ್ಸಿಂಗ್ ಹಾಗೂ ಜತಿನ್ ಗೋಸ್ವಾಮಿ ಅವರನ್ನು 2018 ನೇ ಸಾಲಿನ ‘ಸಂಗೀತ ನಾಟಕ ಅಕಾಡೆಮಿ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ಜೂನ್ 26ರಂದು ಅಸ್ಸಾಂನಲ್ಲಿ ನಡೆದಿದ್ದ ಅಕಾಡೆಮಿಯ ಆಯ್ಕೆ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಗಿದೆ’ ಎಂದು ಅಕಾಡೆಮಿ ತಿಳಿಸಿದೆ.
‘ಅಕಾಡೆಮಿ ರತ್ನ’ ಅಪರೂಪ ಮತ್ತು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಬದುಕಿರುವ 40 ಮಂದಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ನಾಲ್ವರು ಕಲಾವಿದರನ್ನು ಅಕಾಡೆಮಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವುದರಿಂದ ಒಟ್ಟಾರೆ 40 ಮಂದಿಗೆ ಈ ಗೌರವ ನೀಡಿದಂತಾಗಿದೆ’ ಎಂದು ಕೇಂದ್ರದ ಸಂಸ್ಕೃತಿ ಸಚಿವಾಲಯ ತಿಳಿಸಿದೆ.