2018 ನೇ ರೈಟ್‌ಲೈವ್ಲಿ ಹುಡ್‌ ಪ್ರಶಸ್ತಿ ಘೋಷಣೆ

0
1380

ಸೌದಿಯ ಮೂವರು ಮಾನವಹಕ್ಕು ಹೋರಾಟಗಾರರು ಹಾಗೂ ಲ್ಯಾಟಿನ್‌ ಅಮೆರಿಕದ ಇಬ್ಬರು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಹಾಗೂ ಬುರ್ಕಿನಾ ಫಾಸೊ ಹಾಗೂ ಆಸ್ಟ್ರೇಲಿಯಾದ ದೇಶದ ಒಬ್ಬರಿಗೆ 2018ನೇ ಸಾಲಿನ ರೈಟ್‌ಲೈವ್ಲಿ ಹುಡ್‌ ಪ್ರಶಸ್ತಿ ಘೋಷಿಸಲಾಗಿದೆ.

ಕೊಪನ್‌ಹೆಗನ್‌ (ಎಪಿ): ಸೌದಿಯ ಮೂವರು ಮಾನವಹಕ್ಕು ಹೋರಾಟಗಾರರು ಹಾಗೂ ಲ್ಯಾಟಿನ್‌ ಅಮೆರಿಕದ ಇಬ್ಬರು ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಹಾಗೂ ಬುರ್ಕಿನಾ ಫಾಸೊ ಹಾಗೂ ಆಸ್ಟ್ರೇಲಿಯಾದ ದೇಶದ ಒಬ್ಬರಿಗೆ 2018ನೇ ಸಾಲಿನ ರೈಟ್‌ಲೈವ್ಲಿ ಹುಡ್‌ ಪ್ರಶಸ್ತಿ ಘೋಷಿಸಲಾಗಿದೆ. 

‘ಪರ್ಯಾಯ ನೊಬೆಲ್‌’ ಎಂದೇ ಖ್ಯಾತವಾದ ಈ ಪ್ರಶಸ್ತಿಯು 81.64 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಸೌದಿಯ ಅಬ್ದುಲ್ಲಾ ಅಲ್‌–ಹಮೀದ್‌, ಮೊಹಮ್ಮದ್‌ ಫಹಾದ್‌ ಅಲ್‌ ಖತಾನಿ, ವಾಲೀದ್‌ ಅಬು ಅಲ್‌ ಖೇರ್‌ ಅವರು ಹಂಚಿಕೊಳ್ಳಲಿದ್ದಾರೆ. ಗ್ವಾಟೆಮಾಲಾದ ಥೆಲ್ಮಾ ಅಲ್ಡಾನಾ ಹಾಗೂ ಕೊಲೊಂಬಿಯಾದ ಇವಾನ್‌ ವೆಲಾಸ್ಕ್ವೆಝ್‌, ಬುರ್ಕಿನಾ ಫಾಸೊದ ಯಾಕೋಬ ಸವಾಡೋಗೊ, ಆಸ್ಟ್ರೇಲಿಯಾದ ಟೋನಿ ರೈನಾಡೊ ಅವರಿಗೆ ಗೌರವಾರ್ಥವಾಗಿ ಈ ಪ್ರಶಸ್ತಿ ಘೋಷಿಸಲಾಗಿದೆ.