2018 ನೇ ಐಸಿಸಿ ವರ್ಷದ ಪ್ರಶಸ್ತಿಗಳನ್ನು ಬಾಚಿದ ಕಿಂಗ್ ಕೊಹ್ಲಿ

0
859

ಕಳೆದೊಂದು ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವರ್ಷದ ಪ್ರಶಸ್ತಿಗಳನ್ನು ಬಾಚಿದ್ದಾರೆ.ಐಸಿಸಿ

ಹೊಸದಿಲ್ಲಿ:ಕಳೆದೊಂದು ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವರ್ಷದ ಪ್ರಶಸ್ತಿಗಳನ್ನು ಬಾಚಿದ್ದಾರೆ.

ವಿರಾಟ್ ಕೊಹ್ಲಿ ಅವರು ವರ್ಷದ ಟೆಸ್ಟ್, ವರ್ಷದ ಏಕದಿನ ಸಹಿತ ಒಟ್ಟಾರೆಯಾಗಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗಳಿಗೆ ಭಾಜನವಾಗಿದ್ದಾರೆ. ಇದರೊಂದಿಗೆ ಸರ್ ಗಾರ್‌ಫೀಲ್ಡ್ ಸೋಬರ್ಸ್ ಟ್ರೋಫಿ ತಮ್ಮದಾಗಿಸಲಿದ್ದಾರೆ. 

ಐಸಿಸಿ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡಗಳಿಗೂ ನಾಯಕರಾಗಿಯೂ ವಿರಾಟ್ ಕೊಹ್ಲಿ ಅವರೇ ಆಯ್ಕೆಯಾಗಿದ್ದಾರೆ. 

2018 ಜನವರಿ 01ರಿಂದ 31ರ ವರೆಗಿನ ಅವಧಿ ವರೆಗಿನ ಪ್ರದರ್ಶನವನ್ನು ಗಮನಿಸಿ ಪ್ರಶಸ್ತಿ ನೀಡಲಾಗಿದೆ. 

ವಿರಾಟ್ ಬಾಚಿದ ಪ್ರಶಸ್ತಿಗಳು: 
2018 ಐಸಿಸಿ ವರ್ಷದ ಕ್ರಿಕೆಟಿಗ (ಪುರುಷ): (ಸರ್ ಗಾರ್‌ಫೀಲ್ಡ್ ಸೋಬರ್ಸ್ ಟ್ರೋಫಿ). 
2018 ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ (ಪುರುಷ). 
2018 ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ (ಪುರುಷ). 
2018 ಐಸಿಸಿ ವರ್ಷದ ಏಕದಿನ ತಂಡದ ನಾಯಕ (ಪುರುಷ). 
2018 ಐಸಿಸಿ ವರ್ಷದ ಟೆಸ್ಟ್ ತಂಡದ ನಾಯಕ (ಪುರುಷ). 

2018ರಲ್ಲಿ ವಿರಾಟ್ ಸಾಧನೆಗಳು: 
ಪಂದ್ಯ: 37 
ಇನ್ನಿಂಗ್ಸ್: 47 
ರನ್: 2735 
ಸರಾಸರಿ: 68.37 
ಶತಕ: 11 
ಫಿಫ್ಟಿ:

ಟೆಸ್ಟ್ ಸಾಧನೆ: 
ರನ್: 1322 
ಸರಾಸರಿ: 55.08 
ಶತಕ: ದ.ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಶತಕ. 

ಏಕದಿನ: 
ರನ್: 1202 
ಸರಾಸರಿ: 133.55 
ಸತತ ಎರಡನೇ ಬಾರಿಗೆ ಐಸಿಸಿ ವರ್ಷದ ಏಕದಿನ ಕ್ರಿಕಟಿಗ ಪ್ರಶಸ್ತಿಗೆ ಭಾಜನವಾಗಿದ್ದಾರೆ.